ತಿರುವನಂತಪುರಂ: ಕೆಎಸ್‍ಆರ್‍ಟಿಸಿಯಲ್ಲಿ ಬಿಕ್ಕಟ್ಟು ತೀವ್ರಗೊಂಡಿದೆ. ಈ ತಿಂಗಳ ವೇತನ ಸ್ಥಗಿತಗೊಂಡಿದೆ. ವೇತನ ಪರಿಷ್ಕರಣೆ ಒಪ್ಪಂದದ ಪ್ರಕಾರ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಬಿಕ್ಕಟ್ಟು ಈ ತಿಂಗಳು ಮುಂದುವರಿಯುತ್ತದೆ.
ಎಲ್ಲ ನೌಕರರಿಗೆ ವೇತನ ನೀಡಲು 80 ಕೋಟಿ ರೂ.ಅಗತ್ಯವಿದೆ. ಆದರೆ ಇದಕ್ಕೆ ಹಣಕಾಸು ಸಚಿವಾಲಯ ಮಂಜೂರು ಮಾಡಿದ್ದು ಕೇವಲ 30 ಕೋಟಿ. ಈ ತಿಂಗಳ ಕಲೆಕ್ಷನ್ ಸೇರಿಸಿದರೆ ಮಾತ್ರ ಸಂಬಳ ಕೊಡಬಹುದು. ಡೀಸೆಲ್ ಬೆಲೆ ಏರಿಕೆಯಿಂದ ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು, ನೌಕರರು ಕೆಲಸದಿಂದ ವಜಾಗೊಳ್ಳುವ ಆತಂಕದಲ್ಲಿದ್ದಾರೆ ಎಂದು ಸಾರಿಗೆ ಸಚಿವರು ನಿನ್ನೆ ಹೇಳಿದ್ದರು.
ದಿನಕ್ಕೆ 16 ಲಕ್ಷ ಲೀಟರ್ ಡೀಸೆಲ್ ಅಗತ್ಯವಿದೆ. ದಿನದ ಸರಾಸರಿ ಆದಾಯ ಕೇವಲ 5 ಕೋಟಿ ರೂ. ಇದರಲ್ಲಿ ಶೇ.70ರಷ್ಟು ಇಂಧನಕ್ಕಾಗಿಯೇ ಮೀಸಲಿಡಬೇಕಿದೆ. ಸಾಲ ತೀರಿಸಲು ಒಂದು ಕೋಟಿ ಬೇಕು. ಬಸ್ ಪ್ರಯಾಣ ದರ ಏರಿಕೆ ಜಾರಿಗೆ ಬಂದರೂ ಇದ್ಯಾವುದನ್ನೂ ಮೀರಲು ಸಾಧ್ಯವಿಲ್ಲ ಎಂಬುದು ಅಂದಾಜು.