137 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಆಂತರಿಕ ಚುನಾವಣೆಗಳು ನಡೆಯಲಿರುವುದು ಇದೇ ಮೊದಲ ಸಲವಾಗಿದೆ.
ಹಲವಾರು ರಾಜ್ಯಗಳಲ್ಲಿ ಸರಣಿ ಚುನಾವಣಾ ಸೋಲುಗಳು ಹಾಗೂ ಪಕ್ಷ ಸಂಘಟನೆ ಮತ್ತು ಎಲ್ಲಾ ಸ್ತರದ ನಾಯಕತ್ವದಲ್ಲಿ ಸಮಗ್ರ ಬದಲಾವಣೆಗೆ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಬಲವಾ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಂತರಿಕ ಚುನಾವಣೆಗೆ ಮುಂದಾಗಿದೆ.
ಹಲವಾರು ಕಾಂಗ್ರೆಸ್ ಭಿನ್ನಮತೀಯರು ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ ಹಾಗೂ ಪಕ್ಷದಲ್ಲಿ ನಕಲಿ ಸದಸ್ಯತ್ವದ ಪಟ್ಟಿಯನ್ನು ತಯಾರಿಸಲಾಗಿದೆಯೆಂದು ಆರೋಪಿಸಿದ್ದಾರೆ. ಈ ಸಮಸ್ಯೆಗೆ ಸ್ಪಂದಿಸಲು ಕಾಂಗ್ರೆಸ್ ಪಕ್ಷವು ಸದಸ್ಯತ್ವದ ಆಯಪ್ ಒಂದನ್ನು ತಯಾರಿಸಿದ್ದು, ಅದರಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ನಾಲ್ಕು ಸ್ತರಗಳ ದೃಢೀಕರಣ ಪ್ರಕ್ರಿಯೆಯ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಕೇವಲ ಅಧಿಕೃತ ಡೀಲರ್ಗಳಷ್ಟೇ ಈ ಆಯಪ್ ಅನ್ನು ತೆರೆದಿಡಲಾಗಿದೆ ಹಾಗೂ ಕೇವಲ ಕಾರ್ಯಕರ್ತರಿಗಷ್ಟೇ ಈ ಆಯಪ್ ಬಳಸಲು ಅವಕಾಶ ನೀಡಲಾಗಿದೆ.
ಈ ನಾಲ್ಕು ಹಂತಗಳ ಮೂಲಕ ಸದಸ್ಯನನ್ನು ದೃಢಪಡಿಸಿಕೊಂಡ ಬಳಿಕ ಆತನಿಗೆ ಡಿಜಿಟಲ್ ಗುರುತಿನ ಚೀಟಿಯನ್ನು ವಿಶಿಷ್ಟವಾದ ಕೋಡ್ ನೊಂದಿಗೆ ನೀಡಲಿದ್ದು, ಅದರ ಮೂಲಕ ವ್ಯಕ್ತಿಯ ಸದಸ್ಯತ್ವವನ್ನು ದೃಢಪಡಿಸಿಕೊಳ್ಳಲಾಗುತ್ತದೆ, ಈ ಐಡಿ ಕಾರ್ಡ್ ಅನ್ನು ಪಕ್ಷದ ಆಂತರಿಕ ಚುನಾವಣೆಗಳಿಗೆ ಮತದಾರಚೀಟಿಯಾಗಿ ಬಳಸಿಕೊಳ್ಳಲಾಗುತ್ತದೆ.
ಸಾಂಪ್ರದಾಯಿಕವಾಗಿ ರಾಜಕೀಯ ಪಕ್ಷಗಳು ನಡೆಸುವ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಪಕ್ಷದ ಸದಸ್ಯರ ಹೆಸರು, ವಿಳಾಸಗಳು ಹಾಗೂ ಇತರ ವಿವರಗಳನ್ನು ಅರ್ಜಿ ನಮೂನೆಗಳಲ್ಲಿ ಬರೆಯಬಹುದಾಗಿದೆ.
ಆದರೆ ಇಲ್ಲಿ ದೃಢೀಕರಣ ಪ್ರಕ್ರಿಯೆಯಿಲ್ಲದಿರುವುದರಿಂದ ನಕಲಿ ಸದಸ್ಯರ ಸೇರ್ಪಡೆಯ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಪಕ್ಷದ ಸದಸ್ಯರ ಸ್ಟೋರ್ ರೂಂ ಗಳಲ್ಲಿ ಈ ಅರ್ಜಿಗಳು ಉಳಿದುಕೊಳ್ಳುವುದರಿಂದ ಆಂತರಿಕ ಚುನಾವಣೆಗಾಗಿ ಸದಸ್ಯರ ಸಮಗ್ರ ಪಟ್ಟಿಯನ್ನು ಸಂಯೋಜಿಸಲು ಸಾಧ್ಯವಾಗುವುದಿಲ್ಲ.
ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಪ್ರಕ್ರಿಯೆಯು ಬಿಜೆಪಿಯು ಅಮಿತ್ ಶಾ ಬಿಜೆಪಿ ವರಿಷ್ಠರಾಗಿದ್ದ ಸಂದರ್ಭದಲ್ಲಿ 'ಮಿಸ್ಡ್ ಕಾಲ್ ಮೂಲಕ ನಡೆಸಲಾಗುವ ಸದಸ್ಯತ್ವ ಅಭಿಯಾನಕ್ಕಿಂತ ತುಸು ಭಿನ್ನವಾಗಿದೆ. 20 ರಾಜ್ಯಗಳಲ್ಲಿ ಕಾಂಗ್ರೆಸ್ ನಡೆಸಿದ ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ 2.5 ಕೋಟಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಆದರೆ ಇತ್ತೀಚೆಗೆ ವಿಧಾನಸಭಾ ಚುನಾವಣೆಗಳು ನಡೆದ ಐದು ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.