ಮುಳ್ಳೇರಿಯ: ಬೆಳ್ಳೂರು ಶ್ರೀಮಹಾವಿಷ್ಣು ದೇವಾಲಯದ 6ನೇ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಕಾವ್ಯಾಸಕ್ತರಿಂದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏ.30 ರಂದು ಬೆಳಿಗ್ಗೆ 9 ರಿಂದ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳ್ಳೂರು ಶ್ರೀಕ್ಷೇತ್ರದ ಅಧ್ಯಕ್ಷ ಗಂಗಾಧರ ಬಲ್ಲಾಳ್ ಅಡ್ವಳ ದೀಪ ಪ್ರಜ್ವಲನೆಗೈದು ಚಾಲನೆ ನೀಡುವರು. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅ|ಧ್ಯಕ್ಷತೆ ವಹಿಸುವರು. 10.30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ, ಸಾಂಸ್ಕøತಿಕ ಮುಖಂಡ ಚಂದ್ರಶೇಖರ ರಾವ್ ಕಲ್ಲಗ ಅಧ್ಯಕ್ಷತೆ ವಹಿಸುವರು. ಬೆಳ್ಳೂರು ಗ್ರಾ.ಪಂ. ಅ|ಧ್ಯಕ್ಷ ಶ್ರೀಧರ ಬೆಳ್ಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದಭರ್À ಕೊಡುಗೈ ದಾನಿ, ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಕಾಂತಿ ಶೆಟ್ಟಿ ಅವರು ಸನ್ಮಾನಿಸುವರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಸಾಹಿತ್ಯ ಪ್ರೇಮಿ, ಸಂಘಟಕ ಡಾ.ಮೋಹನ್ ದಾಸ್ ರೈ ಶುಭಾಶಂಸನೆಗೈಯ್ಯುವರು. ಪ್ರೊ.ಎ.ಶ್ರೀನಾಥ್ ಅಭಿನಂದನಾ ಭಾಷಣ ಮಾಡುವರು. ಚಂದ್ರಶೇಖರ ಆಚಾರ್ಯ ನಾಟೆಕಲ್ಲು, ದಿವಾಕರ ಬಲ್ಲಾಳ್ ಅಡ್ವಳ ಮೊದಲಾದವರು ಉಪಸ್ಥಿತರಿರುವರು.