ಬದಿಯಡ್ಕ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಸಾತ್ವಿಕ್ ರಾಜ್ ಪಟ್ಟಾಜೆ ಉತ್ತಮ ಅಂಕಗಳೊಂದಿಗೆ(92 ಶೇ.) ತೇರ್ಗಡೆಯಾಗಿದ್ದಾರೆ. ಮಂಗಳೂರಿನ ಸನಾತನ ನಾಟ್ಯವಿದ್ಯಾಲಯದ ನಾಟ್ಯಗುರು ವಿದುಷಿ ಶ್ರೀಲತಾ ಇವರ ಶಿಷ್ಯನಾಗಿದ್ದಾರೆ. ಪ್ರಸ್ತುತ ಇವರು ಪಂಜಾಬಿನ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ಅಗ್ರಿಕಲ್ಚರ್ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.