ಮುಳ್ಳೇರಿಯ: ಧಾರ್ಮಿಕ ಮುಂದಾಳು, ದೈವಕೋಲ ಕಲಾವಿದ ಮನು ಪಣಿಕ್ಕರ್ ಅವರಿಗೆ ಬಳೆ ಪ್ರದಾನ ಸಮಾರಂಭ ಗೋಸಾಡ ಶ್ರೀ ಮಹಿಷಮರ್ದಿನಿ ದೇವಾಲಯದಲ್ಲಿ ಜರುಗಿತು. ದೈವಕೋಲ ವಲಯದಲ್ಲಿ ಸತತ ಮೂರನೇ ಬಾರಿಗೆ ಪಣಿಕ್ಕರ್ ಪದವಿಯ ಸಂಕೇತವಾಗಿ ಬಳೆ ಪಡೆಯುವ ಸೌಭಾಗ್ಯವನ್ನು ವಿಷ್ಣು ಮೂರ್ತಿ ದೈವದ ನೃತ್ಯ ಸೇವಕರಾಗಿರುವ ಮನು ಪಣಿಕ್ಕರ್ ಈ ಮೂಲಕ ಪಡೆದಿದ್ದಾರೆ.
ಈ ಬಾರಿ ಮಾಟೆ ಮನೆತನದ ಹಿರಿಯರ ನೆನಪಿನಲ್ಲಿ ತ್ಯಾಂಪಣ್ಣ- ವಾರಿಜ ರೈ ಗೋಸಾಡ .ಬಳೆ ಹಸ್ತಾಂತರಿಸಿದರು. ಕುಂಬಡಾಜೆ 300 ವೀಡ್ ಕಳಗಂ ನ ಹಿರಿಯ ಅಂಬಾಡಿ ಕಾರ್ನವರ್ ಮತ್ತು ಬಳಗ ಈ ವೇಳೆ ಕಾರ್ಮಿಕತ್ವ ವಹಿಸಿದ್ದರು. ದೇವಾಲಯದ ಆನುವಂಶಿಕ ಮೊಕ್ತೇಸರಶ್ರೀನಿವಾಸ ಅಮ್ಮಣ್ಣಾಯ, ಕ್ಷೇತ್ರದ ಅಧ್ಯಕ್ಷ ಅನಂತ ಭಟ್, ತರವಾಡು ಮನೆತನದ ಸತ್ಯ ನಾರಾಯಣ ಅಮ್ಮಣ್ಣಾಯ, ಪ್ರಧಾನ ಅರ್ಚಕ ರಾಘವೇಂದ್ರ ಚಡಗ, ಡಾ.ವೇಣುಗೋಪಾಲ,ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸದಸ್ಯರಾದ ಅಖಿಲೇಶ್ ನಗುಮುಗಂ ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ,, ಸದಾಶಿವ ಗೋಸಾಡ, ಸುಬ್ಬ ಪಾಟಾಳಿ ,ಗಡಿನಾಡ ಸಾಹಿತ್ಯ ಸಂಸ್ಕøತಿ ಅಕಾಡಮಿಯ ಹರೀಶ ಗೋಸಾಡ ಮೊದಲಾದವರು ಈ ವೇಳೆ ಇದ್ದರು. ದೇವಾಲಯದಲ್ಲಿ ಒತ್ತೆಕೋಲ ಮಹೋತ್ಸವ ಜರುಗಿತು. ಕಾರ್ಯಕ್ರಮ ಅಂಗವಾಗಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ಅನಂತೇಶ ಚಡಗ ನೇತೃತ್ವ ವಹಿಸಿದ್ದರು. ಸಾವಿರಾರು ಮಂದಿ ಭಾಗವಹಿಸಿದ್ದರು.