ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಮೂವರು ಸಂಶೋಧನಾ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ನವಕೇರಳ ಪೋಸ್ಟ್ -ಡಾಕ್ಟರಲ್ ಫೆಲೋಶಿಪ್ ಲಭಿಸಿದೆ. ರಾಜ್ಯದ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ನಡೆಸುವ ಸಂಶೋಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫೆಲೋಶಿಪ್‍ಗೆ ಆಯ್ಕೆ ನಡೆದಿದೆ. ರಸಾಯನಶಾಸ್ತ್ರ ವಿಭಾಗದ ಪೋಸ್ಟ್ ಡಾಕ್ಟರಲ್ ಫೆಲೋ ಡಾ. ಬಿ.ಎನ್.ಸೌಮ್ಯ (ರಾಸಾಯನಿಕ ವಿಜ್ಞಾನ), ಕಂಪ್ಯೂಟರ್ ಸೈನ್ಸ್ ವಿಭಾಗಶಿಕ್ಷಕ ಡಾ.ವಿ.ಆದಿತ್ಯ (ಡಿಜಿಟಲ್ ಸೈನ್ಸ್ ಮತ್ತು ಎಂಜಿನಿಯರಿಂಗ್) ಮತ್ತು ಸಸ್ಯ ವಿಜ್ಞಾನ ಸಂಶೋಧನಾ ವಿದ್ಯಾರ್ಥಿ ಡಾ.ಜೋಯ್ಸ್ ಟಿ.ಜೋಸೆಫ್ (ಲೈಫ್ ಸೈನ್ಸ್) ಫೆಲೋಶಿಪ್ ಪಡೆದರು. ಪೂರ್ಣ ಸಮಯದ ಸಂಶೋಧನೆಗಾಗಿ ಮೊದಲ ವರ್ಷದಲ್ಲಿ ತಿಂಗಳಿಗೆ ರೂ. 50,000/- ಮತ್ತು ಎರಡನೇ ವರ್ಷದಲ್ಲಿ ರೂ. 1,00,000/- ಮೊತ್ತದ ಫೆಲೋಶಿಪ್‍ಗಳು ಲಭ್ಯವಾಗಲಿದೆ. ಎರಡು ಫೆಲೋಶಿಪ್ ಒಂದು ವರ್ಷದವರೆಗೆ ಇರುತ್ತದೆ. ಇದು ಅಗತ್ಯವೆಂದು ಕಂಡುಬಂದರೆ, ಅದನ್ನು ಗರಿಷ್ಠ ಒಂದು ವರ್ಷದವರೆಗೆ ವಿಸ್ತರಿಸಲಾಗುತ್ತದೆ. ಮೇ 8 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಲೋಶಿಪ್ ವಿತರಿಸಲಿದ್ದಾರೆ.