ಕಾಸರಗೋಡು: ಕೇರಳ ರಾಜ್ಯ ಜವುಳಿ ನಿಗಮದ ಅಧೀನದಲ್ಲಿ ಉದುಮದಲ್ಲಿ ಚಟುವಟಿಕೆ ನಡೆಸುತ್ತಿರುವ ಜವುಳಿ ಗಿರಣಿಗಳೊಂದಿಗೆ ದೀರ್ಘಾವಧಿಯ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು. ಯೂನಿಯನ್ ಪ್ರತಿನಿಧಿಗಳು ಮತ್ತು ಆಡಳಿತ ಮಂಡಳಿ ನಡುವೆ ನಡೆದ ಚರ್ಚೆಯ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಒಪ್ಪಂದದ ಪ್ರಕಾರ ಎಲ್ಲಾ ವರ್ಗದ ಕಾರ್ಮಿಕರ ವೇತನ, ಭತ್ಯೆಗಳಲ್ಲೂ ಹೆಚ್ಚಳವುಂಟಾಗಲಿದೆ. ಜನವರಿ 1, 2022 ರಿಂದ ದೀರ್ಘಾವಧಿಯ ಒಪ್ಪಂದದ ಪ್ರಕಾರ ನಾಲ್ಕು ವರ್ಷ ಹಿಂದಿನ ಪರಿಣಾಮದೊಂದಿಗೆ ಜಾರಿಗೆ ಬರಲಿದೆ. ಒಪ್ಪಂದದನ್ವಯ ಉತ್ಪಾದಕತೆಯಲ್ಲಿ 20% ಹೆಚ್ಚಳದ ಗುರಿಯಿರಿಸಿಕೊಳ್ಳಲಾಗಿದೆ. ಹೊಸ ದೀರ್ಘಾವಧಿಯ ಒಪ್ಪಂದದ ಜಾರಿಗೆ ಬರುವುದರೊಂದಿಗೆ ಉದುಮ ಜವುಳಿ ಗಿರಣಿ ಜಿಲ್ಲೆಯಲ್ಲಿ ಕೈಗಾರಿಕಾ ಪ್ರಗತಿಗೆ ಉತ್ತೇಜನ ನೀಡಲಿದೆ. ಆಡಳಿತ ವಿಭಾಗದ ವತಿಯಿಂದ ಜವಳಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ ಜಯರಾಜನ್, ಘಟಕದ ಪ್ರಭಾರಿ ಕೆ.ಎಸ್.ಅನೋಫ್ ಕುಮಾರ್ ಮತ್ತು ಜೂನಿಯರ್ ಮ್ಯಾನೇಜರ್ ರಘುನಾಥ್(ಎಲೆಕ್ಟ್ರಿಕಲ್),ಒಕ್ಕೂಟದ ಪ್ರತಿನಿಧಿಗಳಾದ ಟಿ.ಕೆ.ರಾಜನ್ (ಸಿಐಟಿಯು) ಮಣಿಮೋಹನನ್ (ಸಂಘದ ಅಧ್ಯಕ್ಷರು), ಶೈಜುಕೆ (ಸಂಘ ಕಾರ್ಯದರ್ಶಿ), ಬಾಬುರಾಜನ್ ಪಿವಿ (ಜಂಟಿ ಕಾರ್ಯದರ್ಶಿ), ವಿನೋದ್ ಕುಮಾರ್. ಕೆ (ಕೋಶಾಧಿಕಾರಿ) ಮತ್ತು ಸಜಿಮೋನ್ ಒಪ್ಪಂದಕ್ಕೆ ಸಹಿ ಹಾಕಿದರು.