HEALTH TIPS

ಹಿಂದುವಲ್ಲದ ಕಲಾವಿದೆಗೆ ನಿಷೇಧ ಪ್ರಕರಣ: ಕೇರಳ ದೇವಸ್ಥಾನದ ಉತ್ಸವದಿಂದ ಹಿಂದೆ ಸರಿದ ಇಬ್ಬರು ನರ್ತಕಿಯರು

             ತಿರುವನಂತಪುರ: ಹಿಂದು ಅಲ್ಲ ಎಂಬ ಕಾರಣಕ್ಕೆ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲ್ಪಟ್ಟಿರುವ ಖ್ಯಾತ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ.ಅವರನ್ನು ಬೆಂಬಲಿಸಿ ಇಬ್ಬರು ನೃತ್ಯ ಕಲಾವಿದೆಯರು ಕೇರಳದ ತ್ರಿಶೂರು ಜಿಲ್ಲೆಯ ಕೂಡಲ್ಮಾಣಿಕ್ಯಂ ದೇವಸ್ಥಾನಲ್ಲಿ ಆಯೋಜಿಸಲಾಗಿರುವ ಉತ್ಸವದಿಂದ ಹಿಂದೆ ಸರಿದಿದ್ದಾರೆ.

            ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಸುಮಾರು 800 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.

          ಹಿಂದುಗಳೆಂದು ಗುರುತಿಸಿಕೊಂಡವರಿಗೆ ಮಾತ್ರ ಉತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
             ಮುಸ್ಲಿಮ್ ಆಗಿ ಜನಿಸಿದ ಮಾನ್ಸಿಯಾ ತನ್ನನ್ನು ನಾಸ್ತಿಕಳು ಎಂದು ಗುರುತಿಸಿಕೊಂಡಿದ್ದಾರೆ. ಮಾನ್ಸಿಯಾರ ಭರತನಾಟ್ಯ ಕಾರ್ಯಕ್ರಮ ಮೊದಲೇ ನಿಗದಿಯಾಗಿದ್ದರೂ ಆಡಳಿತ ಮಂಡಳಿಯು ದೇವಸ್ಥಾನದಲ್ಲಿಯ ಸಂಪ್ರದಾಯಗಳನ್ನು ಉಲ್ಲೇಖಿಸಿ ಅವರು ಪ್ರದರ್ಶನ ನಿಡುವುದನ್ನು ನಿಷೇಧಿಸಿದೆ.

ಧರ್ಮವನ್ನು ಆಧರಿಸಿ ಸಹಕಲಾವಿದರ ವಿರುದ್ಧ ತಾರತಮ್ಯವನ್ನು ಹೈದರಾಬಾದ್ನ ಶಾಸ್ತ್ರೀಯ ನೃತ್ಯ ಕಲಾವಿದೆ ಮತ್ತು ಪಿಎಚ್ಡಿ ವಿದ್ಯಾರ್ಥಿನಿ ಅಂಜು ಅರವಿಂದ ಖಂಡಿಸಿದ್ದಾರೆ. ಹಿಂದಿನ ವರ್ಷಗಳ ಉತ್ಸವಗಳಲ್ಲಿ ಧಾರ್ಮಿಕ ಷರತ್ತುಗಳನ್ನು ಹೇರಲಾಗಿರಲಿಲ್ಲ ಎಂದು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿರುವ ಅವರು,'ಓರ್ವ ಕಲಾವಿದೆಯಾಗಿ ಮತ್ತು ಕಲೆಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ ಎಂಬ ಸಂಪೂರ್ಣ ಅರಿವಿನೊಂದಿಗೆ ನನ್ನ ಕಲೆಗೆ 'ಹಿಂದು' ಹೆಸರನ್ನಿಟ್ಟುಕೊಂಡು ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ನೀಡಲು ನನಗೆ ಸಾಧ್ಯವಿಲ್ಲ. ಆದ್ದರಿಂದ ನಾನು ಈ ಅವಕಾಶವನ್ನು ಬಹಿಷ್ಕರಿಸುತ್ತಿದ್ದೇನೆ 'ಎಂದು ಹೇಳಿದ್ದಾರೆ.

            ಇನ್ನೋರ್ವ ನೃತ್ಯ ಕಲಾವಿದೆ ದೇವಿಕಾ ಸಜೀವನ್ ಅವರೂ ಉತ್ಸವವನ್ನು ಬಹಿಷ್ಕರಿಸುವ ಮೂಲಕ ತನ್ನ ಸಮಕಾಲೀನ ಕಲಾವಿದರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪೂರ್ವ ನಿಗದಿಯಂತೆ ಅವರು ಎ.24ರಂದು ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ ನೀಡಬೇಕಿತ್ತು.

             ಈ ನಡುವೆ ಹಿಂದು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಲು ತನಗೆ ಸಾಧ್ಯವಾಗದ್ದರಿಂದ ಕೂಡಲ್ಮಾಣಿಕ್ಯಂ ಉತ್ಸವದಲ್ಲಿ ಪ್ರದರ್ಶನಕ್ಕೆ ತನಗೆ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಇನ್ನೋರ್ವ ನೃತ್ಯ ಕಲಾವಿದೆ ಸೌಮ್ಯಾ ಸುಕುಮಾರನ್ ತಿಳಿಸಿದ್ದಾರೆ. ಅವರು ಕ್ರೈಸ್ತ ಮತೀಯರಾಗಿದ್ದಾರೆ.

              ದೇವಸ್ವಂ ಮಂಡಳಿ ಕಾಯ್ದೆಯಂತೆ ಹಿಂದುಗಳಲ್ಲದವರು ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ. ಈ ನಿಯಮಗಳು ಕೇರಳದ 90 ಶೇಕಡಾ ದೇವಸ್ಥಾನಗಳಿಗೆ ಅನ್ವಯಿಸುತ್ತವೆ ಎಂದು ಸುದ್ದಿಸಂಸ್ಥೆಗೆ ಹೇಳಿದ ಕೂಡಲ್ಮಾಣಿಕ್ಯಂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ್ ಮೆನನ್ ಅವರು, ದೇವಸ್ಥಾನವು ಇದೇ ನೀತಿಯನ್ನು ಅನುಸರಿಸುತ್ತಿದೆ ಮತ್ತು ಈ ವಿಷಯದಲ್ಲಿ ನಿರ್ಧಾರವನ್ನು ಸರಕಾರವು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
             ಮಾನ್ಸಿಯಾ ವಯಲಿನ್ ವಾದಕ ಹಾಗೂ ಕಲಾವಿದ ಶ್ಯಾಮ ಕಲ್ಯಾಣ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ಬಳಿಕ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ದೇವಸ್ಥಾನದ ಪದಾಧಿಕಾರಿಗಳು ತನ್ನನ್ನು ಕೇಳಿದ್ದರು. ತನಗೆ ಧರ್ಮವೇ ಇಲ್ಲ,ತಾನೆಲ್ಲಿಗೆ ಹೋಗಲಿ ಎಂದು ಮಾನ್ಸಿಯಾ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries