ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೇರಳ ಸಂದರ್ಶನವನ್ನು ಮುಂದೂಡಲಾಗಿದೆ. ಏಪ್ರಿಲ್ 29ಕ್ಕೆ ನಿಗದಿಯಾಗಿದ್ದ ಅಮಿತ್ ಶಾ ಭೇಟಿಯನ್ನು ಕೆಲವು ಅನಿವಾರ್ಯ ಅಧಿಕೃತ ಕಾರಣಗಳಿಂದ ಮುಂದೂಡಲಾಗಿದೆ. ಪರಿಷ್ಕøತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ಬಿಜೆಪಿ ಮಹಾಸಭೆ ಮತ್ತು ಪರಿಶಿಷ್ಟ ಜಾತಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಕೇರಳಕ್ಕೆ ಬರುವವರಿದ್ದರು. ಬಿಜೆಪಿ ಕಾರ್ಯಕ್ರಮಕ್ಕೆ ವ್ಯಾಪಕ ಸಿದ್ಧತೆ ಆರಂಭಿಸಿತ್ತು. ತಿರುವನಂತಪುರಂ ನಗರದಾದ್ಯಂತ ಅಮಿತ್ ಶಾ ಅವರನ್ನು ಸ್ವಾಗತಿಸುವ ಹೋಡಿರ್ಂಗ್‍ಗಳು ರಾರಾಜಿಸುತ್ತಿದ್ದವು. ಹೀಗಾಗಿ ಶೀಘ್ರದಲ್ಲೇ ಭೇಟಿ ಮರು ನಿಗದಿಯಾಗುವ ಸೂಚನೆಗಳಿವೆ.
ಬಿಜೆಪಿ ರಾಜ್ಯಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮುಂದೂಡಿರುವುದಾಗಿ ಪ್ರಕಟಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಮಿತ್ ಶಾ ಕಾರ್ಯಕ್ರಮಕ್ಕೆ ಆಗಮಿಸಲು ಉತ್ಸುಕರಾಗಿದ್ದರು. ಈ ಹಿಂದೆ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದಾಗಲೆಲ್ಲ ಅಪಾರ ಜನಸ್ತೋಮ ಅವರನ್ನು ನೋಡಲು ಆಗಮಿಸುತ್ತಿತ್ತು. ಬಿಜೆಪಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸಿತ್ತು.