HEALTH TIPS

ಕತ್ತಲು ಕವಿಯುತ್ತಿದ್ದ ಪೆರ್ಲ ಆರ್.ಟಿ.ಒ.ಚೆಕ್ ಪೆÇೀಸ್ಟು ಬಳಿ ತಿಂಗಳೊಂದರೊಳಗೆ ಅನುದಾನ ವಿನಿಯೋಗಿಸಿ ಬೆಳಕು ಬೆಳಗಿದ ಎಣ್ಮಕಜೆ ಪಂಚಾಯತು ಆಡಳಿತ

   

            ಪೆರ್ಲ: ಚೆರ್ಕಳ ಕಲ್ಲಡ್ಲ ಮುಖ್ಯರಸ್ತೆಯ ಪೆರ್ಲ ಆರ್.ಟಿ.ಒ. ಚೆಕ್ ಪೆÇೀಸ್ಟು ಬಳಿ ಬೀದಿ ದೀಪ ಹಾಳಾದ ಕಾರಣ ರಾತ್ರಿ ವೇಳೆ ಕತ್ತಲು ಕವಿಯುತ್ತಿರುವುದು ನಿರಂತರವಾಗಿತ್ತು. ಕಳೆದ ತಿಂಗಳು  ಆರ್ ಟಿ ಒ ಅಧಿಕಾರಿಯೋರ್ವರು ಈ ಸಮಸ್ಯೆಯನ್ನು ಸ್ಥಳೀಯ ಗ್ರಾಮ ಪಂಚಾಯತು ಅಧ್ಯಕ್ಷರಾದ ಸೋಮಶೇಖರ್ ಜೆ.ಎಸ್.ಅವರ ಗಮನಕ್ಕೆ ತಂದಿದ್ದರು. ತಕ್ಷಣ   ಸ್ಪಂದಿಸಿ ಬೀದಿ ದೀಪವೊಂದನ್ನು ಅಳವಡಿಸಲಾಗಿತ್ತು. ಅನ್ಯರಾಜ್ಯ ವಾಹನಗಳು ಸಂಪರ್ಕಿಸುವ ಇಲ್ಲಿಗೆ ಈ ಬೆಳಕು ಸಾಕಾಗದಿರುವಾಗ ಸರಿ ಸುಮಾರು 28 ದಿನಗಳೊಳಗೆ ಪಂಚಾಯತು ಅನುದಾನ ವಿನಿಯೋಗಿಸಿ ಮಿನಿ ಮಾಸ್ಟ್ ಲೈಟಿನ ವ್ಯವಸ್ಥೆ ಪಂಚಾಯತು ಅಧ್ಯಕ್ಷರು ಮಾಡಲಾಗಿರುವುದನ್ನು ಸ್ಥಳೀಯರು ಅಭಿನಂದಿಸಿದ್ದಾರೆ. ಈ ಬಗ್ಗೆ ಸ್ಥಾಪಿಸಲಾದ ಲೈಟನ್ನು ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂ.ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್,ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ , ಆರ್ ಟಿ ಒ ಅಧಿಕಾರಿ,ಸಿಬ್ಬಂದಿಗಳು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries