HEALTH TIPS

ಕೊರೋನಾ ನಡುವೆಯೇ ಚೀನಾದಲ್ಲಿ 'H3N8 ಹಕ್ಕಿಜ್ವರ' ಕಾಟ: ಮೊದಲ ಬಾರಿಗೆ ಮಾನವರಲ್ಲಿ ಸೋಂಕು ಪತ್ತೆ!

            ಬೀಜಿಂಗ್: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸುತ್ತಿರುವ ಚೀನಾದಲ್ಲಿ ಇದೀಗ ಹೊಸದೊಂದು ತಲೆನೋವು ಆರಂಭವಾಗಿದ್ದು, ಕೋವಿಡ್-19 ಜೊತೆಯಲ್ಲೇ ಪಕ್ಷಿಗಳಲ್ಲಿ ಕಾಣುತ್ತಿದ್ದ ಹಕ್ಕಿ ಜ್ವರ ಇದೀಗ ಮಾನವರಲ್ಲಿ ಕಾಣಿಸಿಕೊಂಡಿದೆ.

            ಕೊರೊನಾ ಆರ್ಭಟದ ನಡುವೆ ಚೀನಾದಲ್ಲಿ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಮಾನವರಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ. H3N8 ಹಕ್ಕಿಜ್ವರದ ಮೊದಲ ಮಾನವ ಪ್ರಕರಣವನ್ನು ಚೀನಾ ದೃಢಪಡಿಸಿದ್ದು, ಜನರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

           H3N8 ಉತ್ತರ ಅಮೆರಿಕಾದ ಜಲಪಕ್ಷಿಗಳಲ್ಲಿ ಮೊದಲು ಈ ಸೋಂಕು ಕಾಣಿಸಿಕೊಂಡಿತ್ತು. ನಂತರ 2002 ರಿಂದ ಇದು ಕಾಣಿಸಿಕೊಳ್ಳುತ್ತಿದ್ದು ಪಕ್ಷಿಗಳು, ಕೋಳಿ, ಕುದುರೆ, ನಾಯಿ, ಸೀಲ್ ಗಳಲ್ಲಿ ಹೆಚ್ಚಾಗಿ ಹರಡುತಿತ್ತು. ಆದರೆ ಇದೇ ಮೊದಲ ಬಾರಿಗೆ ಮಾನವರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ ಜ್ವರ ಮತ್ತು ಇತರ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ ಚೀನಾದ ಮಧ್ಯ ಹೆನಾನ್ ಪ್ರಾಂತ್ಯದಲ್ಲಿ ವಾಸಿಸುವ ನಾಲ್ಕು ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

              ಸೋಂಕಿತ ಹುಡುಗನ ಕುಟುಂಬವು ಮನೆಯಲ್ಲಿ ಕೋಳಿ ಸಾಕಣೆ ಮಾಡುತ್ತಿತ್ತು ಮತ್ತು ಇವರು ಕಾಡು ಬಾತುಕೋಳಿಗಳು ವಾಸಿಸುವ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಹುಡುಗ ನೇರವಾಗಿ ಪಕ್ಷಿಗಳಿಂದ ಸೋಂಕಿಗೆ ಒಳಗಾಗಿದ್ದಾನೆ ಮತ್ತು ಈ ಸೋಂಕಿಗೆ ಕಾರಣವಾದ ವೈರಸ್ ಸ್ಟ್ರೈನ್ "ಮನುಷ್ಯರಿಗೆ ಪರಿಣಾಮಕಾರಿಯಾಗಿ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹುಡುಗನ ನಿಕಟ ಮಾನವ ಸಂಪರ್ಕಗಳ ಪರೀಕ್ಷೆಗಳಲ್ಲಿ "ಯಾವುದೇ ಅಸಹಜತೆಗಳು" ಕಂಡುಬಂದಿಲ್ಲ ಎಂದು ಆಯೋಗವು ಹೇಳಿದೆ.

           ಅದೇನೇ ಇದ್ದರೂ ಸತ್ತ ಅಥವಾ ಅನಾರೋಗ್ಯದ ಪಕ್ಷಿಗಳಿಂದ ದೂರವಿರಿ ಮತ್ತು ಜ್ವರ ಅಥವಾ ಉಸಿರಾಟದ ಲಕ್ಷಣಗಳಿಗೆ ತಕ್ಷಣದ ಚಿಕಿತ್ಸೆಯನ್ನು ಪಡೆಯುವಂತೆ ಅದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

              2012 ರಲ್ಲಿ ಪ್ರಾಣಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ನಂತರ ಯುನೈಟೆಡ್ ಸ್ಟೇಟ್ಸ್ ನ ಈಶಾನ್ಯ ಕರಾವಳಿಯಲ್ಲಿ 160 ಕ್ಕೂ ಹೆಚ್ಚು ಸೀಲ್ ಪ್ರಾಣಿಗಳ ಸಾವಾಗಿತ್ತು. 1997 ಮತ್ತು 2013 ರಲ್ಲಿ ಪತ್ತೆಯಾದ ಹಕ್ಕಿ ಜ್ವರದ H5N1 ಮತ್ತು H7N9 ತಳಿಗಳು ಏವಿಯನ್ ಇನ್ಫ್ಲುಯೆನ್ಜಾ ದಿಂದ ಮಾನವನ ಅನಾರೋಗ್ಯದ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ತಿಳಿಸಿದೆ.

            ಏವಿಯನ್ ಇನ್ಫ್ಲುಯೆನ್ಸ ಮುಖ್ಯವಾಗಿ ಕಾಡು ಪಕ್ಷಿಗಳು ಮತ್ತು ಕೋಳಿಗಳಲ್ಲಿ ಕಂಡುಬರುತ್ತದೆ. ಮನುಷ್ಯರ ನಡುವೆ ಹರಡುವ ಪ್ರಕರಣಗಳು ಅತ್ಯಂತ ವಿರಳ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries