ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ಆಗಿದ್ದ ಬೌಲರ್ ಹರ್ಷಲ್ ಪಟೇಲ್ ತಂಡವನ್ನು ತೊರೆದಿದ್ದಾರೆ.
ಹರ್ಷಲ್ ಪಟೇಲ್ ಅವರ ಸಹೋದರಿ ನಿಧನರಾಗಿದ್ದು ಇದರಿಂದಾಗಿ ಅವರು ಐಪಿಎಲ್ ಬಯೋಬಬಲ್ ಅನ್ನು ತೊರೆದು ತಮ್ಮ ಮನೆಗೆ ಮರಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಕುಟುಂಬದಲ್ಲಿ ಸಂಭವಿಸಿದ ದುರಂತದ ಬಗ್ಗೆ ತಿಳಿದುಕೊಂಡ ಹರ್ಷಲ್ ಐಪಿಎಲ್ ಬಯೋಬಬಲ್‌ನಿಂದ ಹೊರನಡೆಯಬೇಕಾಯಿತು.
ಹರ್ಷಲ್ ಕಳೆದ ಕೆಲವು ಋತುಗಳಲ್ಲಿ RCBಯ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. ಮುಂಬೈ ವಿರುದ್ಧ ತಂಡವು ಏಳು ವಿಕೆಟ್‌ಗಳ ಗೆಲುವಿನಲ್ಲಿ ಎರಡು ವಿಕೆಟ್ ಪಡೆದರು. 'ದುರದೃಷ್ಟವಶಾತ್, ಹರ್ಷಲ್ ಅವರ ಕುಟುಂಬದ ಸದಸ್ಯರ ಸಾವಿನಿಂದ ಬಯೋ ಬಬಲ್ ಅನ್ನು ಬಿಡಬೇಕಾಯಿತು.
ಅಂದಹಾಗೆ, ಏಪ್ರಿಲ್ 12ರಂದು ಅSಏ ವಿರುದ್ಧದ ಪಂದ್ಯದ ಮೊದಲು ಖಅಃ ಕ್ರಿಕೆಟಿಗರು ಮತ್ತೆ ತಂಡದ ಬಯೋಬಬಲ್‌ಗೆ ಸೇರುತ್ತಾರೆ. ಹರ್ಷಲ್ ಭಾರತ ಪರ ಇದುವರೆಗೆ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಹರ್ಷಲ್ ಕಳೆದ ವರ್ಷವೇ ಭಾರತಕ್ಕೆ ಪಾದಾರ್ಪಣೆ ಮಾಡಿದರು.