ಮುಂಬೈ: 'ಅಸ್ಲಿ ಆ ರಹಾ ಹೈ, ನಕಲಿ ಸೆ ಸಾವಧಾನ್' (ಅಸಲಿ ನಾಯಕ ಬರುತ್ತಿದ್ದಾರೆ, ನಕಲಿ ನಾಯಕನ ಬಗ್ಗೆ ಎಚ್ಚರದಿಂದಿರಿ) ಪೋಸ್ಟರ್ ಅಭಿಯಾನದ ನಡುವೆಯೇ ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಜೂನ್ 10ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಿವಸೇನಾ ಘೋಷಿಸಿದೆ.

ಆದಿತ್ಯ ಅವರು ಅಯೋಧ್ಯೆಗೆ ನೀಡಲಿರುವ ಮೂರನೇ ಭೇಟಿ ಇದಾಗಲಿದೆ.
'ಆದಿತ್ಯ ಅವರು ಅಯೋಧ್ಯೆಗೆ ಭೇಟಿ ನಿಡಲಿದ್ದಾರೆ. ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಇದು ನಂಬಿಕೆಗೆ ಸಂಬಂಧಪಟ್ಟದ್ದು. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ದೇಶದ ಇತರ ಸ್ಥಳಗಳಿಂದಲೂ ಶಿವ ಸೈನಿಕರು ಆದಿತ್ಯ ಅವರೊಡನೆ ಬರಲಿದ್ದಾರೆ' ಎಂದು ಶಿವಸೇನಾ ವಕ್ತಾರ, ರಾಜ್ಯ ಸಭೆಯ ಸದಸ್ಯ ಸಂಜಯ್ ರಾವುತ್ ತಿಳಿಸಿದರು.
ಈ ಕುರಿತು ಮಾತನಾಡಿರುವ ಆದಿತ್ಯ ಠಾಕ್ರೆ, 'ನಮಗೆಲ್ಲರಿಗೂ ಹಾಗು ರಾಜ್ಯದ ಜನತೆಗೆ ನಾನು ಶ್ರೀರಾಮನ ಆಶೀರ್ವಾದವನ್ನು ಕೋರುತ್ತೇನೆ. ಶಿವಸೇನಾ ಪ್ರಮುಖರು (ಉದ್ಧವ್ ಠಾಕ್ರೆ) ಮೇ 14ರ ರ್‍ಯಾಲಿಯಲ್ಲಿ ಏನು ಹೇಳುತ್ತಾರೆ ಕೇಳಬೇಕು' ಎಂದು ಹೇಳಿದರು.
ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವುದರ ಬಗ್ಗೆ, ಉತ್ತರ ಪ್ರದೇಶದಲ್ಲಿ 'ಅಸ್ಲಿ ಆ ರಹಾ ಹೈ, ನಕಲಿ ಸೆ ಸಾವಧಾನ್' (ಅಸಲಿ ಬರುತ್ತಿದೆ, ನಕಲಿ ಬಗ್ಗೆ ಎಚ್ಚರದಿಂದಿರಿ) ಎಂಬ ಪೋಸ್ಟರ್ ಅಭಿಯಾನ ಶಿವಸೇನಾದಿಂದ ನಡೆಯುತ್ತಿದೆ. ವಾಸ್ತವದಲ್ಲಿ, ಉದ್ಧವ್ ಸಂಬಂಧಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಜೂನ್ 5ರಂದು ಅಯೋಧ್ಯೆಗೆ ನೀಡಲಿರುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಈ ಅಭಿಯಾನ ನಡೆಯುತ್ತಿದೆ.