ಕಣ್ಣೂರು: ಪಾಸ್ ಪೋರ್ಟ್ ಪರಿಶೀಲನೆಗೆ ಲಂಚ ಸ್ವೀಕರಿಸುತ್ತಿದ್ದ ಎಎಸ್‍ಐ ವಿಜಿಲೆನ್ಸ್ ಬಂಧಿಸಿದೆ. ಕುಳಪ್ಪರಂನ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಪಿ.ರಮೇಶ (48) ಎಂಬವರನ್ನು ವಿಜಿಲೆನ್ಸ್ ಬಂಧಿಸಿದೆ.
ಶರತ್‍ಕುಮಾರ್ ಅವರು ಮಟಾಯಿ ಮಂಜೇರವಲಪ್ಪು ಎಂಬಲ್ಲಿ ಪಾಸ್‍ಪೆÇೀರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ರಮೇಶ ಪಾಸ್ ಪೆÇೀರ್ಟ್ ಪರಿಶೀಲನೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಶರತ್‍ಕುಮಾರ್ ವಿಜಿಲೆನ್ಸ್‍ಗೆ ಮಾಹಿತಿ ನೀಡಿದ್ದರು. ನಿನ್ನೆ ಸಂಜೆ ಪಳಯಂಗಡಿ ಬಸ್ ನಿಲ್ದಾಣದ ಬಳಿ ಹಣ ನೀಡುತ್ತಿದ್ದ ವೇಳೆ ವಿಜಿಲೆನ್ಸ್ ತಂಡ ಆತನನ್ನು ಬಂಧಿಸಿದೆ.
ಕಣ್ಣೂರು ವಿಜಿಲೆನ್ಸ್ ಉಪ ಪೋಲೀಸ್ ವರಿಷ್ಠಾಧಿಕಾರಿ ಬಾಬು ಪೆರಿಂಗತ್ ನೇತೃತ್ವದ ವಿಜಿಲೆನ್ಸ್ ತಂಡ ಎಎಸ್‍ಐ ಅವರನ್ನು ಬಂಧಿಸಿದೆ.