ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಫನಾ ದಿನಾಚರಣೆ ಮೇ 5ರಂದು ಮಧ್ಯಾಹ್ನ 2,30ಕ್ಕೆ ಬೀರಂತಬೈಲ್ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಲ್ಲಿ ಜರುಗಿತು.
ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ, ವಕೀಲ ಎನ್.ಕೆ ಮೋಹನ್‍ದಾಸ್ ಸಮಾರಂಭ ಉದ್ಘಾಟಿಸಿದರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಧಾರಿ, ಹಿರಿಯ ಶಿಕ್ಷಕ ರಾಜಾರಾಮ್ ಟಿ ಹಾಗೂ ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಉಪನ್ಯಾಸ ನೀಡಿದರು. ಸಂಘಟನೆ ಗೌರವ ಕೋಶಾಧಿಕಾರಿ ಡಾ. ಬಿ ರಾಜಗೋಪಾಲ್, ರಾಧಾಕೃಷ್ಣ ಉಳಿಯತ್ತಡ್ಕ, ಹರೀಶ್ ಪೆರ್ಲ, ಟಿ.ಎ.ಎನ್ ಖಂಡಿಗೆ, ಸತ್ಯನಾರಾಯಣ ವೈ, ಮಹಾಲಿಂಗೇಶ್ವರ ರಾಕ್, ವೇಣುಗೋಪಾಲ್ ಇ. ಡಾ. ಜಯಪ್ರಕಾಶ್ ನಾರಾಯಣ, ಕೃಷ್ಣ ಭಟ್, ಕವಿತಾ ಕೂಡ್ಲು, ಪದ್ಮಾವತಿ ಟೀಚರ್, ವಿಜಯಕುಮಾರಿ ಟೀಚರ್, ಶಿವರಾಂ ಭಟ್ ಕಲ್ಲಕಟ್ಟ, ನಾರಾಯಣ ಮೂರ್ತಿ, ಗಣೇಶ್ ಪ್ರಸಾದ್, ಜಯರಾಜ್ ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಬಾಲಮಧುರಕಾನನ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಪ್ರಮಿಳಾ ಚುಳ್ಳಿಕಾನ, ಕೇಶವಪ್ರಸಾದ್ ಕೆ, ಡಾ. ವಾಣಿಶ್ರೀ, ಗುರುರಾಜ್ ಎಂ.ಆರ್. ರಾಧಾಕೃಷ್ಣ ಬಲ್ಲಾಳ್, ಶ್ಯಾಮಲಾ ಎಸ್.ಎನ್ ಭಟ್, ಶೇಖರ್ ಶೆಟ್ಟಿ ಸ್ವರಚಿತ ಕವನಗಳನ್ನು ವಾಚಿಸಿದರು. ಕಾರ್ಯಕ್ರಮದ ಅಂಗವಾಗಿ ಸಂಗೀತ ಶಿಕ್ಷಕಿ ಹರಿಣಾಕ್ಷಿ ಅವರಿಂದ ನಾಡಗೀತೆ ಕಾರ್ಯಕ್ರಮ ಜರುಗಿತು. ಪ್ರವೀಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶೇಖರ್ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.