ಪ್ಲಾಸ್ಟಿಕ್ ಸರ್ಜರಿ ಅಥವಾ ಕಾಸ್ಮೆಟಿಕ್ ಸರ್ಜರಿ ಎಂದ ತಕ್ಷಣ ನಮ್ಮ ತಲೆಗೆ ಬರುವುದು ಸೌಂದರ್ಯವೃದ್ಧಿಸಲು ಮಾತ್ರ ಆ ಚಿಕಿತ್ಸೆ ಮಾಡಿಸುತ್ತಾರೆ ಎಂದು, ಆದರೆ ಅದು ನಿಜವಲ್ಲ ಅನೇಕ ಸಮಸ್ಯೆಗಳನ್ನು ಗುಣಪಡಿಸಿ ರೋಗಿ ಸಂತೋಷದ ಹಾಗೂ ಆರೋಗ್ಯಕರ ಜೀವನ ನಡೆಸುವಂತಾಗಲು ಕೂಡ ಈ ಚಿಕಿತ್ಸೆ ಮಾಡುತ್ತಾರೆ.
ಪ್ಲಾಸ್ಟಿಕ್ ಸರ್ಜರಿ ಎಂದರೆ ಸರ್ಜರಿ ಬಳಸುವುದಿಲ್ಲ, ಪ್ಲಾಸ್ಟಿಕ್ ಎಂಬ ಪದ ಗ್ರೀಕ್ ಪದ ಪ್ಲಾಸ್ಟಿಕೋಸ್‌ದಿಂದ ಬಂದಿದೆ. ಅದರ್ಥ ಮೆಲೆಬಲ್ ಅಥವಾ ಅಚ್ಚು ಎಂಬರ್ಥವನ್ನು ನೀಡುತ್ತದೆ, ಪ್ಲಾಸ್ಟಿಕ್ ಸರ್ಜರಿಯಲ್ಲಿ ಸಿಲಿಕೋನೆ, ಕೋರ್ ಟೆಕ್ಸ್, ಮೆಡ್‌ಪೋರ್ ಈ ಮೂರು ವಸ್ತುಗಳನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಸರ್ಜರಿಯಲ್ಲಿ ಬಳಸಲಾಗುವುದು.
ನಾವಿಲ್ಲಿ ಪ್ಲಾಸ್ಟಿಕ್ ಸರ್ಜರಿ ಕುರಿತ ಕೆಲವೊಂದು ಆಸಕ್ತಿಕರ ಸಂಗತಿಗಳ ಬಗ್ಗೆ ಹೇಳಿದ್ದೇವೆ ನೋಡಿ:
1. ಪ್ಲಾಸ್ಟಿಕ್ ಸರ್ಜರಿ ಅಡ್ಡಪರಿಣಾಮ ದೀರ್ಘಕಾಲವಿರುವುದಿಲ್ಲ ಇದನ್ನು ನಿಮ್ಮ ಸಮಸ್ಯೆ ಬಗೆಹರಿಸಲು ಬಳಸಲಾಗುವುದೇ ಹೊರತು ಹೊಸ ಸಮಸ್ಯೆ ಹುಟ್ಟು ಹಾಕುವುದಕ್ಕೆ ಅಲ್ಲ.
2. ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿ ಟ್ರೀಟ್ಮೆಂಟ್ ಹೆಚ್ಚಾಗುತ್ತಿದೆ ಭಾರತದಲ್ಲಿ ಪ್ರತೀ ವರ್ಷ ಸುಮಾರು 9 ಲಕ್ಷ ಜನರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ವಿಶ್ವದಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ಮಾಡುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿದೆ
3.ಪ್ಲಾಸ್ಟಿಕ್ ಸರ್ಜರಿಯನ್ನು ಕಾಯಿಲೆಯನ್ನು ಗುಣಪಡಿಸಲು ಬಳಸಲಾಗುವುದು ಪ್ಲಾಸ್ಟಿಕ್ ಸರ್ಜರಿ ಅನ್ನು ಬರೀ ಸೌಂದರ್ಯವೃದ್ಧಿಗಷ್ಟೇ ಅಲ್ಲ ಅನೇಕ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಬಳಸಲಾಗುವುದು. ಸುಟ್ಟ ಗಾಯಗಳನ್ನು ಮರೆ ಮಾಚಲು, ಆಕ್ಸಿಡೆಂಟ್‌ನಿಂದ ಹಾಳಾದ ಮುಖದ ಚಹರೆ ಸರಿಪಡಿಸಲು ಹೀಗೆ ಅನೇಕ ಸಮಸ್ಯೆ ಪರಿಹರಿಸಲು ಬಳಸಲಾಗುವುದು. ಇದನ್ನು ಸರ್ಜನ್ ಮಾಡಲಾಗುವುದು.
4. ಸುಟ್ಟ ಗಾಯಕ್ಕೆ ಪ್ಲಾಸ್ಟಿಕ್ ಪ್ರಮುಖ ಚಿಕಿತ್ಸೆ ಸುಟ್ಟ ಗಾಯಗಳಾದಾಗ ಮುಖದ ಚಹರೆ ಅಥವಾ ಅಂದವನ್ನು ಮರಳಿ ಪಡೆಯಲು ಪ್ಲಾಸ್ಟಿಕ್ ಸರ್ಜರಿ ಸಹಕಾರಿ.
5. ಪ್ಲಾಸ್ಟಿಕ್ ಸರ್ಜರಿಯಿಂದ ನಿಮ್ಮನ್ನು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಲಾಗುವುದು ಅನೇಕ ಜನರು ಹಲವಾರು ಸೌಂದರ್ಯ ನ್ಯೂನ್ಯತೆ ಹೊಂದಿರುತ್ತಾರೆ ಅಂಥ ಸಮಸ್ಯೆ ಬಗೆಹರಿಸಲು ಈ ಚಿಕಿತ್ಸೆ ವರವಾಗಿದೆ.
6. ಪ್ಲಾಸ್ಟಿಕ್ ಸರ್ಜರಿಯಿಂದ ಸ್ತನ ಕ್ಯಾನ್ಸರ್ ಬರುತ್ತೆ ಎನ್ನುವುದು ತಪ್ಪು ಕಲ್ಪನೆ ಪ್ಲಾಸ್ಟಿಕ್ ಸರ್ಜರಿಯಲ್ಲಿ ಬಳಸುವ ಸಿಲಿಕೋನೆದಿಂದಾಗಿ ಸ್ತನ ಕ್ಯಾನ್ಸರ್ ಬರುತ್ತದೆ ಎಂಬುವುದು ತಪ್ಪು ಕಲ್ಪನೆ. ಸ್ತನ ಕ್ಯಾನ್ಸರ್‌ಗೂ ಇದಕ್ಕೂ ಸಂಬಂಧವಿಲ್ಲ.
7. ಸ್ತನದ ಆಕಾರ ಬದಲಾವಣೆಗೂ ಎದೆಹಾಲಿಗೂ ಸಂಬಂಧವಿಲ್ಲ ಕೆಲವರು ಸ್ತನದ ಆಕಾರ ದೊಡ್ಡದು ಮಾಡುತ್ತಾರೆ, ಸ್ತನ ಜೋತು ಬೀಳುತ್ತಿದ್ದರೆ ಅದಕ್ಕೆ ಶೇಪ್ ನೀಡುವ ಸರ್ಜರಿ ಮಾಡಿಸುತ್ತಾರೆ. ಆದರೆ ಇದು ಭವಿಷ್ಯದಲ್ಲಿ ಮಗುವಾದ ಮೇಲೆ ಎದೆಹಾಲಿನ ಉತ್ಪತ್ತಿ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ.
8. ಪ್ಲಾಸ್ಟಿಕ್ ಸರ್ಜರಿ ಕಲೆರಹಿತವಲ್ಲ ಪ್ಲಾಸ್ಟಿಕ್ ಸರ್ಜರಿಯಲ್ಲೂ ಕಲೆ ಬೀಳುತ್ತದೆ, ಆದರೆ ಇದರ ಕಲೆ ಅಷ್ಟಾಗಿ ಗೊತ್ತಾಗುವುದಿಲ್ಲ, ಕೆಲವೊಂದು ಕಲೆಗಳು ವಾರದೊಳಗೆ ಮಾಸಬಹುದು.
9. ಪ್ಲಾಸ್ಟಿಕ್ ಸರ್ಜರಿ ಮಹಿಳೆಯರು ಮಾತ್ರ ಮಾಡಿಸುತ್ತಿಲ್ಲ ಸೌಂರ್ಯವರ್ಧನೆಗಾಗಿ ಮಹಿಳೆಯರು ಮಾತ್ರ ಕಾಸ್ಮೆಟಿಕ್ ಸರ್ಜರಿ ಮಾಡಿಸುತ್ತಾರೆ ಎಂಬ ತಪ್ಪು ಕಲ್ಪನೆ ಇದೆ, ಆದರೆ ಅದು ತಪ್ಪು ಪುರುಷರು ಕೂಡ ಮಾಡಿಸುತ್ತಾರೆ.
10. ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಬಳಸಲ್ಲ ಪ್ಲಾಸ್ಟಿಕ್ ಸರ್ಜರಿ ಎಂದರೆ ಪ್ಲಾಸ್ಟಿಕ್ ಬಳಸುತ್ತಾರೆ ಎಂಬ ತಪ್ಪು ಕಲ್ಪನೆ ಇದೆ, ಆದರೆ ಇದರಲ್ಲಿ ಸಿಲಿಕೋನೆ, ಕೋರೆ ಟೆಕ್ಸ್ ಮತ್ತು ಪೆಡಪೋರ್ (silicone, Gore-Tex, Medpor) ಬಳಸಲಾಗುವುದು.
ಕೊನೆಯದಾಗಿ: ಪ್ಲಾಸ್ಟಿಕ್ ಸರ್ಜರಿಯಿಂದ ಅಡ್ಡಪರಿಣಾಮಗಳೂ ಆಗಿವೆ. ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಗುಣಪಡಿಸಲು ಇದು ಅತ್ಯುತ್ತಮವಾದ ಆಯ್ಕೆ, ಆದರೆ ಸಂದರ್ಯವೃದ್ಧಿಗೆ ಮಾಡುವುದಾದರೆ ಕೆಲವೊಮ್ಮೆ ನಿಮ್ಮ ಇರುವ ಮುಖ ಲಕ್ಷಣ ಹಾಳಾಗುವ ಸಾಧ್ಯತೆ ಇರುವುದರಿಂದ ತಜ್ಞರ ಸಲಹೆ ಪಡೆದು ಮಾಡಿಸಿ.