ಬದಿಯಡ್ಕ : ಎಡನೀರಿನ ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಮೇ. 11ರಿಂದ 5 ದಿನಗಳ ಕನ್ನಡ ಸಂಸ್ಕøತಿ ಶಿಬಿರ-2022ವು ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಮೇ.11ರಂದು ಬೆಳಗ್ಗೆ 9.30ಕ್ಕೆ ವಿಶ್ರಾಂತ ಐಎಎಸ್ ಅಧಿಕಾರಿ ಡಾ. ಕೆ ಗೋಪಾಲಕೃಷ್ಣ ಭಟ್ ಎಡನೀರು ಶಿಬಿರವನ್ನು ಉದ್ಘಾಟಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರಾಧಾಕೃಷ್ಣ ಎನ್ ಬೆಳ್ಳೂರು ಹಾಗೂ ಪತ್ರಕರ್ತ, ಕಲಾವಿದ ವಿ ಜಿ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕಥೆ, ಕವನ, ಭಾಷಣ, ಪ್ರಬಂಧ ರಚನೆ, ನಾಟಕ ಅಭಿನಯ, ಚಿತ್ರಕಲೆ, ಮುಖವಾಡ ರಚನೆ, ಸಮೂಹ ಗಾಯನ, ರಂಗಗೀತೆ, ದೇಶಭಕ್ತಿ ಗೀತೆ, ಭಜನೆ ಮೊದಲಾದ ಅನೇಕ ಚಟುವಟಿಕೆಗಳು ನಡೆಯಲಿದೆ. ಮೇ.15ರಂದು ಸಂಜೆ 3 ರಿಂದ ನಡೆಯುವ ಶಿಬಿರದ ಸಮಾರೋಪÀ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ವಹಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ನಿವೃತ್ತ ತಂತ್ರಜ್ಞ ತೆಕ್ಕುಂಜ ಕುಮಾರಸ್ವಾಮಿ, ಎಡನೀರು ಶಾಲಾ ಮುಖ್ಯ ಶಿಕ್ಷಕ ಮಧುಸೂದನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಬಿಎಎಂಎಸ್‍ನಲ್ಲಿ 4ನೇ ರ್ಯಾಂಕ್ ಪಡೆದ ಎಡನೀರಿನ ಡಾ.ಶುಭಾ ಎಸ್ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಕಾರ್ಯಕ್ರಮದಲ್ಲಿ ಕಾಸರಗೋಡಿನ ಬಾಲಪ್ರತಿಭೆ ಆದ್ಯಂತ್ ಅಡೂರು ರಚಿಸಿದ 'ಚುಟುಚುಟುಕು' ಚುಟುಕು ಸಂಕಲನ ಕೃತಿಯು ಬಿಡುಗಡೆಗೊಳ್ಳಲಿದೆ ಎಂದು ಭೂಮಿಕಾ ಪ್ರತಿಷ್ಠಾನ ನಿರ್ದೇಶಕಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪುಮೂಲೆ ತಿಳಿಸಿದ್ದಾರೆ.