ಕಾಸರಗೋಡು: ಜಿಲ್ಲೆಯ ಇತಿಹಾಸಪ್ರಸಿದ್ಧ ಪೈವಳಿಕೆಯ ಜುಮಾ ಮಸೀದಿಯ ದರ್ಸ್ ಶತಮಾನೋತ್ಸವ ಆಚರಣೆ ಮತ್ತು ಪ್ರಮುಖ ವಿಧ್ವಾಂಸರು, ಸೂಫಿವರ್ಯರಾಗಿದ್ದ ಮರ್‍ಹೂಂ ಪಯ್ಯಕ್ಕಿ ಉಸ್ತಾದ್ ಅವರ ಉರುಸ್ ಮುಬಾರಕ್ ಮೇ 11 ರಿಂದ 16 ರ ತನಕ ಪೈವಳಿಕೆ ಜುಮಾ ಮಸೀದಿ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುಆಗಿ ಶತಮಾನೋತ್ಸವ ಆಚರಣಾ ಸಮಿತಿ ಪದಾಧಿಕಾರಿ ಅಬ್ದುಲ್ ಮಜೀದ್ ದಾರಿಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 11 ಬುಧವಾರ ಬೆಳಗ್ಗೆ 9.30 ಕ್ಕೆ ಕುಂಬೋಲ್ ಸಯ್ಯದ್ ಆಟಕೋಯ ತಂಙಳ್ ಅವರ ನೇತೃತ್ವದಲ್ಲಿ ಮಖಾಂ ಝಿಯಾರತಿಪ್ರಾರ್ಥನೆಯೊಂದಿಗೆ ಸಯ್ಯದ್ ನುಹ್ಮಾನ್ ತಂಙಳ್ ಪೈವಳಿಕೆ ಧ್ವಜಾರೋಹಣ ನಡೆಸುವರು. ಸಂಜೆ 7.30ಕ್ಕೆ ನಡೆಯುವ ಉರುಸ್ ಸಮಾರಂಭದ ಉದ್ಘಾಟನೆಯನ್ನು ಸಮಸ್ತ ಕಾರ್ಯದರ್ಶಿ ಕಾಸರಗೋಡು ಖಾಝಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ನಡೆಸುವರು. ಎರಡನೇ ದಿವಸ ಗುರುವಾರ ರಾತ್ರಿ 7.30 ಕ್ಕೆ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಉಧ್ಘಾಟಿಸಲಿದ್ದು ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡು ಭಾಷಣ ನಡೆಸಲಿದ್ದಾರೆ. ವಿವಿಧ ದಿವಸಗಳಲ್ಲಿ ನಡೆಯುವ ಧಾಂರ್ಇಖ ಪ್ರವಚನದಲ್ಲಿ ಪ್ರಮುಖ ವಾಗ್ಮಿಗಳು, ವಿದ್ವಾಂಸರು ಪಾಲ್ಗೊಳ್ಳುವರು.
ಮೇ 16ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಳಗ್ಗೆ 10ಕ್ಕೆ ಕುಂಬೋಲ್ ಸಯ್ಯಿದ್ ಅಲಿ ತಂಙಳ್ ನೇತೃತ್ವದಲ್ಲಿ ಮೌಲೀದ್ ಪಾರಾಯಣ, 11ಕ್ಕೆ ನಡೆಯುವ ಸ್ನೇಹ ಸಂಗಮ ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉಣ್ಣಿತಾನ್ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಯಿಂದ ಅನ್ನದಾನ ನಡೆಯುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹನೀಫ್ ಹಾಜಿ, ಟಿಂಬರ್ ಮೋನು, ಅಜೀಜ್ ಮರಿಕೆ, ಪಿ ಎಸ್ ಇಬ್ರಾಹಿಂ ಹಾಜಿ , ಸ್ವಾಲಿಹ್ ಹಾಜಿ, ಅಜೀಜ್ ಕಲಾಯಿ, ಶಾಫಿ ಹಾಜಿ ಪೈವಳಿಕೆ, ಎಂ.ಕೆ ಮೂಸ ಸತ್ತಾರ್, ಪಿ ಕೆ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.