ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 13 ರನ್ ಗಳ ಜಯ ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳನ್ನು ಗಳಿಸಿ ಎದುರಾಳಿ ತಂಡಕ್ಕೆ ಭರ್ಜರಿ ಸವಾಲನ್ನು ನೀಡಿತ್ತು.
ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸಿಎಸ್ ಕೆ 6 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ ಗಳಲ್ಲಿ 189 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ 13 ರನ್ ಗಳ ಜಯ ತನ್ನದಾಗಿಸಿಕೊಂಡಿತು. ನಿಕೋಲಸ್ ಪೂರನ್ ಎಸ್ ಹೆಚ್ ಆರ್ ಪರ 33 ಎಸೆತಗಳಲ್ಲಿ 64 ರನ್ ಗಳಿಸಿದ್ದು ಗರಿಷ್ಠವಾಗಿದ್ದರೆ, ತಂಡದ ನಾಯಕ ಕೇನ್ ವಿಲಿಯಮ್ಸನ್ 47 ರನ್, ಅಭಿಷೇಕ್ ಶರ್ಮಾ 39 ರನ್ ಗಳನ್ನು ಗಳಿಸಿದರು. ಸಿಎಸ್ ಕೆ ಪರ ಮುಖೇಶ್ ಚೌಧರಿ 46 ರನ್ ನೀಡಿ 4 ವಿಕೆಟ್ ಗಳಿಸಿದರು.