ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಕಾರ್ಯಾಚರಣೆ ವೇಳೆ ಪ್ರದರ್ಶಿಸಿದ ಧೈರ್ಯಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಆರು ಮರಣೋತ್ತರ ಸೇರಿ 13 ಸಿಬ್ಬಂದಿಗೆ ಶೌರ್ಯ ಚಕ್ರ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ಅಸಾಧಾರಣ ನಿರ್ಧಾರಕ್ಕಾಗಿ ಪರಮ ವಿಶಿಷ್ಟ ಸೇವಾ ಪದಕ(ಪಿವಿಎಸ್ಎಂ) ನೀಡಿ ಗೌರವಿಸಲಾಯಿತು.
'ಶೌರ್ಯ, ಅದಮ್ಯ ಧೈರ್ಯ ಮತ್ತು ಕರ್ತವ್ಯಕ್ಕೆ ವಿಪರೀತ ಭಕ್ತಿ ತೋರಿದ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರಪತಿಗಳು 14 ಪಿವಿಎಸ್ಎಂ, ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು(ಯುವೈಎಸ್ಎಂ) ಮತ್ತು 24 ಅತಿ ವಿಶಿಷ್ಟ ಸೇವಾ ಪದಕಗಳನ್ನು(ಎವಿಎಸ್ಎಂ) ಅಸಾಧಾರಣ ಕ್ರಮಗಳಿಗಾಗಿ ವಿಶಿಷ್ಟ ಸೇವೆಗಾಗಿ ಪ್ರದಾನ ಮಾಡಿದರು.
ಜನರಲ್ ಮನೋಜ್ ಪಾಂಡೆ ಅವರು ಏಪ್ರಿಲ್ 30ರಂದು ಸೇನಾ ಸಿಬ್ಬಂದಿಯ 29ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮೊದಲು ಅವರು ಮೂರು ತಿಂಗಳ ಕಾಲ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಸೈನ್ಯದ ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡರ್ ಇನ್ ಚೀಫ್ ಆಗಿದ್ದರು.