ನವದೆಹಲಿ: ದೇಶದ ಮೊದಲ 'ಅಮೃತ ಸರೋವರ' ಉತ್ತರ ಪ್ರದೇಶದ ರಾಮ್‌ಪುರ್‌ನಲ್ಲಿ ನಿರ್ಮಾಣವಾಗಿದ್ದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಶುಕ್ರವಾರ ಇದನ್ನು ಉದ್ಘಾಟಿಸಲಿದ್ದಾರೆ.
ನವದೆಹಲಿ: ದೇಶದ ಮೊದಲ 'ಅಮೃತ ಸರೋವರ' ಉತ್ತರ ಪ್ರದೇಶದ ರಾಮ್‌ಪುರ್‌ನಲ್ಲಿ ನಿರ್ಮಾಣವಾಗಿದ್ದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಶುಕ್ರವಾರ ಇದನ್ನು ಉದ್ಘಾಟಿಸಲಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿಗೆ 'ಅಮೃತ ಸರೋವರ' ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಕೊಳಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ 'ಮನ್ ಕೀ ಬಾತ್'ನಲ್ಲಿ ಕರೆ ನೀಡಿದ್ದರು.
ಈ ಕುರಿತ ಹೇಳಿಕೆಯಲ್ಲಿ ನಖ್ವಿ ಅವರು, ಅಲ್ಪಾವಧಿಯಲ್ಲಿ ಈ ಸರೋವರವನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಜನರ ಸಹಭಾಗಿತ್ವ ಪ್ರಮುಖ ಪಾತ್ರವಹಿಸಿದೆ ಎಂದು ನಖ್ವಿ ಹೇಳಿದ್ದಾರೆ.
ಪರಿಸರ ಮತ್ತು ಜಲಮೂಲ ರಕ್ಷಣೆಯ ಜೊತೆಗೆ ಜನಾಕರ್ಷಣೆಯ ತಾಣವಾಗಿಯೂ ಕಿರು ಕೆರೆ ಅಥವಾ ಕೊಳಗಳು ರೂಪು ತಳೆಯಲಿವೆ. ದೋಣಿವಿಹಾರ ಸೇರಿದಂತೆ ಇದರ ಜೊತೆಗೆ ಮನರಂಜನಾ ಚಟುವಟಿಕೆಗಳು ಇರಲಿವೆ.