ಉಜ್ಜೈನ್: 13 ಹಸುಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಬೆಂಕಿಗೆ ಹೊತ್ತಿದ್ದು, ಹಸುಗಳು ಸಜೀವ ದಹನವಾಗಿವೆ.
ಭಾನುವಾರ ಉಜ್ಜೈನ್ ಜಿಲ್ಲೆಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಶನಿವಾರ ತಡ ರಾತ್ರಿ ಈ ಘಟನೆ ವರದಿಯಾಗಿದ್ದು, ಖಚ್ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
20 ಕ್ಕೂ ಹೆಚ್ಚು ದನಗಳನ್ನು ಟ್ರನ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಚಾಲಕನೇ ಇಲ್ಲದ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಸ್ಥಳೀಯರುಗಮನಿಸಿದ್ದು, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಆಗಲೇ ಐದು ಹಸುಗಳು ಹಾಗೂ 8 ಕರುಗಳು ಸಾವನ್ನಪ್ಪಿದ್ದವು ಎಂದು ಖಚ್ರೋಡ್ ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಯಾದವ್ ಹೇಳಿದ್ದಾರೆ.
ಗ್ರಾಮಸ್ಥರ ಪ್ರಕಾರ 10-15 ಹಸುಗಳನ್ನು ರಕ್ಷಿಸಲಾಗಿತ್ತು ಅವು ಹತ್ತಿರದಲ್ಲಿದ್ದ ಕಾಡಿಗೆ ಓಡಿಹೋದವು ಎಂದು ಹೇಳಿದ್ದಾರೆ. 5 ಹಸುಗಳನ್ನು ಗೋಶಾಲೆಗೆ ಕಳಿಸಲಾಗಿದೆ. ವಾಹನದ ಮಾಲಿಕ, ಚಾಲಕನಿಗಾಗಿ ಶೋಧಕಾರ್ಯಾಚರಣೆ ನಡೆದಿದೆ.