HEALTH TIPS

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದ ಭಾರತ

          ನವದೆಹಲಿ: ಕಳೆದ ವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 180 ದೇಶಗಳಲ್ಲಿ 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದಿದೆ ಎಂದು ಮಂಗಳವಾರ ಬಿಡುಗಡೆಯಾದ ಜಾಗತಿಕ ಮಾಧ್ಯಮ ವಾಚ್ ಡಾಗ್ ವರದಿ ತಿಳಿಸಿದೆ.

            ಈ ವರ್ಷ, ನಾರ್ವೆ (1ನೇ) ಡೆನ್ಮಾರ್ಕ್ (2 ನೇ), ಸ್ವೀಡನ್ (3 ನೇ) ಎಸ್ಟೋನಿಯಾ (4 ನೇ) ಮತ್ತು ಫಿನ್ಲ್ಯಾಂಡ್ (5 ನೇ) ಉನ್ನತ ಸ್ಥಾನಗಳನ್ನು ಪಡೆದುಕೊಂಡರೆ, 180 ದೇಶಗಳು ಮತ್ತು ಪ್ರಾಂತ್ಯಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ.

           ನೇಪಾಳವನ್ನು ಹೊರತುಪಡಿಸಿ ಭಾರತದ ನೆರೆಯ ರಾಷ್ಟ್ರಗಳ ಶ್ರೇಯಾಂಕವು ಸಹ ಕುಸಿದಿದೆ. ಸೂಚ್ಯಂಕವು ಪಾಕಿಸ್ತಾನ 157ನೇ ಸ್ಥಾನ, ಶ್ರೀಲಂಕಾ 146ನೇ ಸ್ಥಾನ, ಬಾಂಗ್ಲಾದೇಶ 162ನೇ ಮತ್ತು ಮೇನ್ಮಾರ್ 176ನೇ ಸ್ಥಾನದಲ್ಲಿದೆ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

            ಆರ್‌ಎಸ್‌ಎಫ್ 2022 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ, ನೇಪಾಳವು ಜಾಗತಿಕ ಶ್ರೇಯಾಂಕದಲ್ಲಿ 30 ಅಂಕಗಳನ್ನು ಎಹಚ್ಚು ಪಡೆದು 76 ನೇ ಸ್ಥಾನದಲ್ಲಿದೆ. ಕಳೆದ ವರ್ಷ, ಸೂಚ್ಯಂಕದಲ್ಲಿ ಹಿಮಾಲಯ ರಾಷ್ಟ್ರವು 106ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 145ನೇ, ಶ್ರೀಲಂಕಾ 127ನೇ, ಬಾಂಗ್ಲಾದೇಶ 152ನೇ ಮತ್ತು ಮ್ಯಾನ್ಮಾರ್ 140ನೇ ಸ್ಥಾನದಲ್ಲಿತ್ತು.

               ಕಳೆದ ವರ್ಷ 150ನೇ ಸ್ಥಾನದಲ್ಲಿದ್ದ ರಷ್ಯಾ 155ನೇ ಸ್ಥಾನದಲ್ಲಿದ್ದರೆ, ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ನೊಂದಿಗೆ ಚೀನಾ ಎರಡು ಸ್ಥಾನ ಮೇಲೇರಿದ್ದು 175ನೇ ಸ್ಥಾನದಲ್ಲಿದೆ. ಕಳೆದ ವರ್ಷ ಚೀನಾ 177ನೇ ಸ್ಥಾನದಲ್ಲಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries