ನವದೆಹಲಿ: 15-18ನೇ ವಯಸ್ಸಿನ ಶೇ 80 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವೀಯ ಮಂಗಳವಾರ ಹೇಳಿದರು.
ನವದೆಹಲಿ: 15-18ನೇ ವಯಸ್ಸಿನ ಶೇ 80 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವೀಯ ಮಂಗಳವಾರ ಹೇಳಿದರು.
'ದೇಶದಲ್ಲಿ ಇದುವರೆಗೆ 192.52 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. 15-18 ವಯಸ್ಸಿನವರಿಗೆ ಜನವರಿಯಿಂದ ಲಸಿಕೆ ನೀಡಲು ಆರಂಭಿಸಿ ಇಲ್ಲಿಯ ತನಕ 5.92 ಕೋಟಿ ಮೊದಲ ಡೋಸ್, 12-14 ವಯೋಮಾನದವರಿಗೆ ಮಾರ್ಚ್ 16ರಿಂದ ಆರಂಭವಾದ ಅಭಿಯಾನದಲ್ಲಿ ಇಲ್ಲಿಯವರೆಗೆ 3.30 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ಭಾರತ ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ' ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.