ಬದಿಯಡ್ಕ: ಮೊಗೇರ ಸರ್ವೀಸ್ ಸೊಸೈಟಿ ಕಾಸರಗೋಡು ಇವರ ನೇತೃತ್ವದಲ್ಲಿ ಮೊಗೇರ ಸಮಾಜದ ಅಭಿವೃದ್ಧಿಗಾಗಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೊಗೇರ ಮಹಾಸಂಗಮ 2022 ಕಾರ್ಯಕ್ರಮವು ಮೇ.15ರಂದು ಭಾನುವಾರ ಮದರುಮಾತೆ ಮಹಾನಗರ, ಸುಬೇದಾರ್ ಕಮಲಾಕ್ಷ ಕುಂಬಳೆ ವೇದಿಕೆ (ಅಟಲ್ ಜೀ ಸಭಾಂಗಣ) ಮಧೂರು ಉಳಿಯತ್ತಡ್ಕದಲ್ಲಿ ಜರಗಲಿರುವುದು. ಈ ಸಂದರ್ಭದಲ್ಲಿ ಮೊಗೇರ ರತ್ನ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಕಲಾಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ ತನಕ ಕಾರ್ಯಕ್ರಮಗಳು ನಡೆಯಲಿರುವುದು. ಕರ್ನಾಟಕ ಸರ್ಕಾರದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಸುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ ವೈವಿಧ್ಯಮಯ ನೃತ್ಯ ಪ್ರದರ್ಶನ, ಸಿನಿಮಾಟಿಕ್ ನೃತ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ, ರಸಮಂಜರಿ ಜರಗಲಿದೆ.