HEALTH TIPS

ಉಳಿಯತ್ತಡ್ಕದಲ್ಲಿ ಮೇ 15ಕ್ಕೆ ಮೊಗೇರ ಸರ್ವಿಸ್ ಸೊಸೈಟಿಯಿಂದ ಮೊಗೇರ ಮಹಾ ಸಂಗಮ 2022: ಸಚಿವ ಎಸ್.ಅಂಗಾರರಿಗೆ ಮೊಗೇರ ರತ್ನ ಪ್ರಶಸ್ತಿ ಪ್ರದಾನ

 

                 ಮಧೂರು: ಮೊಗೇರ ಸರ್ವಿಸ್ ಸೊಸೈಟಿಯ ನೇತೃತ್ವದಲ್ಲಿ ಮೊಗೇರ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ "ಮೊಗೇರ ಮಹಾ ಸಂಗಮ 2022" ಎಂಬ ಕಾರ್ಯಕ್ರಮವನ್ನು ಮೇ 15ರಂದು ಉಳಿಯತ್ತಡ್ಕದಲ್ಲಿ ಹಮ್ಮಿಕೊಳ್ಳಲಾಗಿದೆ.  ಇದರ ಅಂಗವಾಗಿ ಉಳಿಯುತ್ತಡ್ಕದ ಅಟಲ್ ಜೀ ಸಭಾಂಗಣದಲ್ಲಿ ವಿಶೇಷವಾಗಿ ಸಜ್ಜೀಕರಿಸಲಾದ  ಮದರು ಮಾತೆ ಮಹಾನಗರ,  ಸುಬೇದರ್ ಕಮಲಾಕ್ಷ ಕುಂಬಳೆ ವೇದಿಕೆಯಲ್ಲಿ ಮೊಗೇರ ರತ್ನ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

          ಅಂದು ಬೆಳಿಗ್ಗೆ ಗಂಟೆ 8.30ಕ್ಕೆ ಮೊಗೇರ ಕುಲದೇವ ಗಳಿಗೆ ಕಲಶ ಪ್ರಾರ್ಥನೆ 9 ಗಂಟೆಗೆ ಕಾಸರಗೋಡು ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷ ಬಾಬು ಯು ಪಚ್ಲಂಪಾರೆ  ಧ್ವಜಾರೋಹಣ ಗೈಯುವರು. 9.30ರಿಂದ  ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. 10.30ಕ್ಕೆ ಮೊಗೇರ ಮಹಾಸಂಗಮ 2022 ಸಭಾ ಕಾರ್ಯಕ್ರಮ ಜರಗಲಿದೆ.  ಕರ್ನಾಟಕ ಸರ್ಕಾರದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಸುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

               ಮೊಗೇರ ಸರ್ವಿಸ್ ಸೊಸೆಟಿ ಕೇರಳ ರಾಜ್ಯ ಸಮಿತಿ ಲಕ್ಷ್ಮಣ ಐ.ಪೆರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್.ಕುಂಞÂಂಬು,ಎಕೆಎಂ ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಕೃಷ್ಣ, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಶಾಂತ,  ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ, ಕೇರಳ ತುಳು ಅಕಾಡೆಮಿ ಸದಸ್ಯ,ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಮೀಂಜ ಪಂಚಾಯತು ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಕುಳೂರು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಕುಮಾರ್ ಕೆ.ಪಿ, ಕಾಸರಗೋಡು ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷ ಬಾಬು ಯು ಪಚ್ಲಂಪಾರೆ, ಉಪಾಧ್ಯಕ್ಷೆ ಗಿರಿಜಾ ತಾರನಾಥ ಕುಂಬಳೆ,  ಮೊಗೇರ ಸರ್ವಿಸ್ ಸೊಸೈಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಕೆ ಸ್ವಾಮಿ ಕೃಪಾ, ಮೋಹನ ಯು ಮಂಜೇಶ್ವರ ಮೊದಲಾದವರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸಚಿವ ಎಸ್. ಅಂಗಾರ ಅವರಿಗೆ ಮೊಗೇರ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ ವಿವಿಧ ಸಾಧರಿಗೆ ಸನ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ ವಿತರಣೆ ಜರಗಲಿದೆ. ಬಳಿಕ ಜಾನಪದ ನೃತ್ಯ ಸಂಗೀತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries