ಕಾಸರಗೋಡು: ನಾಗರಕಟ್ಟೆಯ ಶ್ರೀ ಭಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಮಂದಿರದಲ್ಲಿ ಶ್ರೀ ಭಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ನೇತೃತ್ವದಲ್ಲಿ ಮೇ 15 ರಂದು ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ 136 ನೇ ವಧರ್Àಂತ್ಯುತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಉಚಿತ ಸಾಮೂಹಿಕ ಬ್ರಹ್ಮೋಪದೇಶ ಹಾಗು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ.
ಬೆಳಗ್ಗೆ 9.30 ರಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ. ಡಾ|ಕೃಷ್ಣ ಪ್ರಸಾದ್ ಕೂಡ್ಲು ಉದ್ಘಾಟಿಸುವರು. ಕೆ.ನಾಗೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬೆಳಗ್ಗೆ 7 ಕ್ಕೆ ಗಣಹೋಮ, 9.50 ರಿಂದ 10.20 ರ ವರೆಗಿನ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ನಡೆಯಲಿದೆ. 9.30 ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, 11.30 ಕ್ಕೆ ಮಹಾಪೂಜೆ, ಮಧ್ಯಾಹ್ನ 12.30 ಕ್ಕೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.
ಅಪರಾಹ್ನ 2.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸೇವಾ ಸಮಾಜದ ಅಧ್ಯಕ್ಷ ಲಕ್ಷ್ಮಣ ಬೀರಂತಬೈಲು ಅಧ್ಯಕ್ಷತೆ ವಹಿಸುವರು. ರಘುರಾಮ ರಾವ್ ಗೌರವ ಉಪಸ್ಥಿತರಿರುವರು. ಡಾ.ಕೃಷ್ಣ ಪ್ರಸಾದ್ ಕೂಡ್ಲು, ಬಾಲಕೃಷ್ಣ ಮಲ್ಲಿಗೆಮಾಡು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅತಿಥಿಗಳಾಗಿ ಶೋಭಾ ರೋಹಿತಾಕ್ಷ, ಬಾಲಚಂದ್ರ, ದಿವಾಕರ ಮೀಪುಗುರಿ ಭಾಗವಹಿಸುವರು. ಸುಧಾಕರ ಕೂಡ್ಲು, ದಿನೇಶ್ ಸಿ.ಎಚ್, ಪಾಂಡುರಂಗ ವಿದ್ಯಾನಗರ ಉಪಸ್ಥಿತರಿರುವರು. ನಾಡೋಜ ಡಾ.ಕೃಷ್ಣ ಪ್ರಸಾದ್ ಕೂಡ್ಲು, ಪುರುಷೋತ್ತಮ ಬಿ, ರಾಜೇಶ್ ಬಿ.ಆರ್, ಜಯಪ್ರಕಾಶ್ ಕುಂಬಳೆ ಅವರಿಗೆ ಅಭಿನಂದನೆ ನಡೆಯಲಿದೆ. ನೂತನವಾಗಿ ನಗರಸಭೆ ಸದಸ್ಯರಾಗಿ ಆಯ್ಕೆಯಾದ ವರಪ್ರಸಾದ್ ಕೋಟೆಕಣಿ, ರಂಜಿತ ಮೋಹನ್‍ದಾಸ್, ಪವಿತ್ರ ಸಂತೋಷ್ ಅವರನ್ನು ಸಮ್ಮಾನಿಸಲಾಗುವುದು. ಆ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.