HEALTH TIPS

ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!

              ಗಾಂಧಿನಗರ: ಭಾರತದಲ್ಲೇ ಅತಿ ಹೆಚ್ಚು ಶ್ರೀಮಂತರಿರುವ ಹಳ್ಳಿಯೊಂದಿದೆ. ಎಲ್ಲರ ಹುಬ್ಬೇರುವುದಂತೂ ಸತ್ಯ. ವಿದೇಶವನ್ನೂ ಮೀರಿಸುವ ಈ ಹಳ್ಳಿ ಜನರು ಅಷ್ಟೇ ಬುದ್ದಿವಂತರೂ ಕೂಡ ಇದ್ದಾರೆ. ವಿಶ್ವದಲ್ಲೇ ಶ್ರೀಮಂತ ಹಳ್ಳಿಗಳ ಪಟ್ಟಿಯಲ್ಲೂ ಇದು ಸ್ಥಾನ ಪಡೆದುಕೊಂಡಿದೆ.

               ಉತ್ತಮ ಜೀವನಕ್ಕೆ ಹಣ ಪ್ರಮುಖ ಪಾತ್ರ ವಹಿಸಲಿದ್ದು, ಮನುಷ್ಯನ ಬಹುಪಾಲು ಸಮಸ್ಯೆಗಳನ್ನು ಇದರಿಂದಲೇ ಬಗೆಹರಿಸಿಕೊಳ್ಳಬಹುದು. ಅದಕ್ಕಾಗಿ ಜೀವನದಲ್ಲಿ ಉತ್ತಮ ಯೋಜನೆಗಳು ಸಹ ಇರಬೇಕು.

                ಹೀಗೊಂದು ಗ್ರಾಮ ಇರುವುದು ಗುಜರಾತ್​​​ಮ ಕಚ್​​ ಜಿಲ್ಲೆಯಲ್ಲಿರುವ ಮದಪುರ್​​​ ಗ್ರಾಮ. ಇಡೀ ಹಳ್ಳಿಯ ಜನರ ಬುದ್ಧಿವಂತಿಕೆಯಿಂದಾಗಿ ಇಂದು ಇವರು ದೇಶದಲ್ಲೇ ಶ್ರೀಮಂತರಾಗಿದ್ದಾರೆ. ಈ ಹಳ್ಳಿಯ ಜನರು ಪ್ರತಿಯೊಬ್ಬರ ಖಾತೆಯಲ್ಲೂ 15 ಲಕ್ಷ ರೂ. ಹಣವನ್ನು ಜಮೆ ಮಾಡಿದ್ದಾರೆ.

ಇಲ್ಲಿ ಶೇ.60 ರಷ್ಟು ಮಂದಿ ವಿದೇಶದಲ್ಲಿ ನೆಲೆಸಿದ್ದಾರೆ. ಈ ಗ್ರಾಮದ ಜನರು ಹೆಚ್ಚಾಗಿ ವಾಸಿಸುತ್ತಿರುವುದು. ಇಂಗ್ಲೆಂಡ್​ ರಾಜಧಾನಿ ಲಂಡನ್​ನಲ್ಲಿ. 1968ರಲ್ಲೇ ಅಲ್ಲಿ ಸಂಘವನ್ನು ಸಹ ನಿರ್ಮಿಸಿಕೊಂಡಿದ್ದರು. ಇಂದೂ ಕೂಡ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದು, ಪರಸ್ಪರ ಆಗ್ಗಾಗ್ಗೆ ಭೇಟಿಯಾಗಿ ಸಭೆ-ಸಮಾರಂಭಗಳನ್ನು ಮಾಡುತ್ತಿರುತ್ತಾರೆ.

              ಈ ಹಳ್ಳಿಯಲ್ಲಿ ಅತ್ಯಾಧುನಿಕ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳು ಕೂಡ ಇವೆ. ಅಲ್ಲದೇ ಹೈಟೆಕ್​ ಪಾರ್ಕ್​ಗಳು ಕೂಡ ಇವೆ. ಈ ಹಳ್ಳಿ ಯಾವುದೇ ನಗರಕ್ಕಿಂತಲೂ ಕಡಿಮೇಯೇನಿಲ್ಲ. ವಿದೇಶದಲ್ಲಿ ಕೆಲಕಾಲ ನೆಲೆಸಿ, ನಂತರ ತಮ್ಮ ಹಳ್ಳಿಗಳಿಗೆ ಮರಳಿ ಇಲ್ಲೇ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಾರೆ ತಾವು ಅಭಿವೃದ್ಧಿಯಾಗುವುದಲ್ಲದೇ ಇಡೀ ಗ್ರಾಮದ ಜನರೇ ಅಭಿವೃದ್ಧಿಯತ್ತ ಒಟ್ಟಾಗಿ ಸಾಗುತ್ತಿರುವ ಈ ಹಳ್ಳಿಯ ಜನರು ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries