ಮಂಜೇಶ್ವರ : ಇತಿಹಾಸ ಪ್ರಸಿದ್ಧ ಮಚ್ಚಂಪಾಡಿ ಅಸ್ಸಯ್ಯಿದ್ ಬಪ್ಪಂಕುಟ್ಟಿ ತಂಙಳ್ ರವರ ಮಖಾಂ ಊರೂಸ್ ಮೇ 12 ರಿಂದ 15 ರ ತನಕ ನಡೆಯಲಿದೆ. ಮೇ 12 ರಂದು ಬೆಳಿಗ್ಗೆ 10 ಘಂಟೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ದ್ವಜಾರೋಹಣ ಗೆಯ್ಯುವರು. ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅಧ್ಯಕ್ಷತೆ ವಹಿಸುವರು. 11 ಘಂಟೆಗೆ ನಡೆಯುವ ವಿವಿಧ ಮದ್ರಸಾ ವಿದ್ಯಾರ್ಥಿಗಳ ಸಂಗಮಕ್ಕೆ ಮಚ್ಚಂಪಾಡಿ ಹಿಮಾಯತುಲ್ ಇಸ್ಲಾಮ್ ಮದ್ರಸ ಸದರ್ ಯೂಸುಫ್ ಬಾಖವಿ ನೇತೃತ್ವ ನೀಡುವರು. 7 ಘಂಟೆಗೆ ಮಖಾಂ ಝಿಯಾರತ್ ನಡೆಯಲಿದೆ. ಸಂಜೆ 7.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಚ್ಚಂಪಾಡಿ ಮುದರ್ರಿಸ್ ಉಮರ್ ಅಹ್ಸನಿ ಸ್ವಾಗತ ಭಾಷಣ ಮಾಡುವರು. ಸಯ್ಯಿದ್ ಕೆ. ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸುವರು. ಉಡುಪಿ ಖಾಸಿ ಸೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸುವರು. ಪೇರೋಡ್ ಮುಹಮ್ಮದ್ ಅಸ್ಹರಿ ಯುವಜನತೆ ಇಸ್ಲಾಂ ನಲ್ಲಿ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡುವರು. ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಕುಞÂ ಪಾರ ಉಪಸ್ಥಿತರಿರುವರು. ಮೇ 13 ಶುಕ್ರವಾರ ಅಸರ್ ನಮಾಜಿನ ಬಳಿಕ ಸ್ವಲಾತ್ ವಾರ್ಷಿಕ ನಡೆಯಲಿದ್ದು ಇಸ್ಮಾಯಿಲ್ ಮದನಿ ಕೊಡಿಪ್ಪಾಡಿ ನೇತೃತ್ವ ನೀಡುವರು. ಸಂಜೆ 8 ಘಂಟೆಗೆ ನಡೆಯುವ ಧಾರ್ಮಿಕ ಪ್ರವಚನ ನದಲ್ಲಿ ಯುವ ವಾಗ್ಮಿ ಅಬ್ದುಲ್ಲ ಸಲೀಂ ವಾಫಿ ( ಪ್ರೀತಿಯ ಮಾತಾ ಪಿತರು ) ಎಂಬ ವಿಷಯದಲ್ಲಿ ಭಾಷಣ ಮಾಡಲಿರುವರು. ಬಷೀರ್ ಬಾಖವಿ ದುವಾಗೆ ನೇತೃತ್ವ ನೀಡುವರು. ಮೇ 14 ಶನಿವಾರ ಸಂಜೆ 4 ಘಂಟೆಗೆ ಮಂಜೇಶ್ವರ ಸಂಯುಕ್ತ ಜಮಾಅತ್ ಗೊಳಪಟ್ಟ ಜಮಾಅತ್ ಸಮಿತಿ ಪದಾಧಿಕಾರಿಗಳು ಹಾಗೂ ಉಸ್ತಾದರುಗಳನ್ನು ಭಾಗವಹಿಸಿ ಮಹಲ್ಲ್ ಸಂಗಮ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಉರೂಸ್ ಸಮಿತಿ ಅಧ್ಯಕ್ಷ ಪಿ.ಎಚ್ಚ್ ಅಬ್ದುಲ್ ಹಮೀದ್ ಸ್ವಾಗತ ಭಾಷಣ ಮಾಡಲಿರುವರು. ಶೈಖುಲ್ ಜಾಮಿಅಃ ಪ್ರೊಫೆಸರ್ ಆಲಿಕ್ಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿರುವರು. ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕ್ಕೋಯ ತಂಙಳ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಹಾಫಿಲ್ ಇ.ಪಿ ಅಬೂಬಕ್ಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿರುವರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ , ಉಳ್ಳಾಲ ಶಾಸಕ ಯು.ಟಿ ಖಾದರ್ , ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕ್ಕುನ್ನು ಸಹಿತ ವಿವಿಧ ಗಣ್ಯರು ಉಪಸ್ಥಿತÀಲಿರುವರು. ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ಉಪಸ್ಥಿತರಿರುವರು. ಮೇ 15 ರಂದು ಭಾನುವಾರ ಹಗಲು ಉರೂಸ್ ಕಾರ್ಯಕ್ರಮ ನಡೆಯಲಿದ್ದು 11 ಘಂಟೆಗೆ ಖತಮುಲ್ ಕುರ್‍ಆನ್ , 12 ಘಂಟೆಗೆ ಮೌಲೀದ್ ಪಾರಾಯಣ ನಡೆಯಲಿದೆ. ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ನೇತೃತ್ವ ನೀಡುವರು. ಸಯ್ಯಿದ್ ಇಬ್ರಾಹಿಂ ಭಾತಿಷ ತಂಙಳ್ ಆನೆಕಲ್ಲು ದುಆಗೆ ನೇತೃತ್ವ ನೀಡಲಿರುವರು. ಬಳಿಕ ಅನ್ನದಾನ ನಡೆಯಲಿದೆಯೆಂದು ಉರೂಸ್ ಸಮಿತಿ ಅಧ್ಯಕ್ಷ ಪಿ.ಎಚ್ಚ್ ಅಬ್ದುಲ್ ಹಮೀದ್ , ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.