ಕಾಸರಗೋಡು: ಚೆರುವತ್ತೂರಿನಲ್ಲಿ ವಿಷ ಆಹಾರ ಸೇವಿಸಿ ವಿದ್ಯಾರ್ಥಿಯೋರ್ವೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಪೇರಲಂ ಮೂಲದ ದೇವಾನಂದೆ (16) ಎಂದು ಗುರುತಿಸಲಾಗಿದೆ. ವಿಷಾಹಾರ ಸೇವಿಸಿದ ಹದಿನೇಳು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಚೆರುವತ್ತೂರಿನ ಐಡಿಯಲ್ ಕೂಲ್‍ಬಾರ್ ಮತ್ತು ಫುಡ್ ಪಾಯಿಂಟ್ ಎಂಬ ಮಳಿಗೆಯಿಂದ ಷವರ್ಮಾ(ಚಿಕನ್ ಸಹಿತ ಮಾಂಸ ಬಳಸಿದ ಖಾದ್ಯ) ಸೇವಿಸಿದ ಬಳಿಕ ಅದು ವಿಷಕಾರಿಯಾದ ಘಟನೆ ವರದಿಯಾಗಿದೆ. ಶವರ್ಮಾ ಸೇವಿಸಿದ ಬಾಲಕನನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ.
ದೇವಾನಂದ ಕರಿವೆಳ್ಳೂರು ಶಾಲೆಯ ವಿದ್ಯಾರ್ಥಿನಿ. ಆಹಾರ ಇಲಾಖೆ ಅಧಿಕಾರಿಗಳ ಪ್ರಕಾರ ಅನೈರ್ಮಲ್ಯದಲ್ಲಿ ಅಡುಗೆ ಮಾಡಿರುವುದು ವಿಷಾಹಾರವಾಗಲು ಕಾರಣ ಎನ್ನಲಾಗಿದೆ. ಕೂಲ್‍ಬಾರ್ ಆಹಾರ ಸುರಕ್ಷತೆ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಫುಡ್ ಪಾಯ್ಸನ್ನು ಆದ ಬಳಿಕ ಕೂಲ್ ಬಾರ್ ಮುಚ್ಚಲಾಗಿದೆ.