ಕಾಸರಗೋಡು : ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಏರ್ಪಡಿಸುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ 16 ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮೇ 14 ರಂದು ಸಂಜೆ 5.30 ಕ್ಕೆ ಕಾಸರಗೋಡು ಮುನ್ಸಿಪಲ್ ಕಾನರೆನ್ಸ್ ಹಾಲ್‍ನಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ದೀಪ ಪ್ರಜ್ವಲನೆಗೊಳಿಸುವರು. ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಸಹಸಂಘ ಚಾಲಕ್ ಸುನಿಲ್ ಆಚಾರ್ ಭಾಗವಹಿಸುವರು. ಖ್ಯಾತ ಸಿನೆಮಾ ಹಾಗು ರಂಗನಟ ನವೀನ್ ಪಡೀಲ್, ಖ್ಯಾತ ನೇತ್ರ ತಜ್ಞ ಡಾ.ಅನಂತ ಕಾಮತ್ ಅತಿಥಿಗಳಾಗಿ ಭಾಗವಹಿಸುವರು. ರಂಗ ಕಲಾವಿದ ಸುಧಾಕರ್ ಸಾಲ್ಯಾನ್, ನಿವೃತ್ತ ಬ್ಯಾಂಕ್ ಮೆನೇಜರ್ ಶಶಿಕಾಂತ ರಾವ್ ಬೇಕಲ್ ಗೌರವ ಉಪಸ್ಥಿತರಿರುವರು.
ಈ ಸಂದಭರ್Àದಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ರಂಗಚಿನ್ನಾರಿ-ಕೇಶವಾನಂದ ಭಾರತೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಉಪ್ಪಳ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಪ್ರಮೀಳ ಮಾಧವ್ ಅವರಿಗೆ ರಂಗಚಿನ್ನಾರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಾಕಶಾಸ್ತ್ರ ಕ್ಷೇತ್ರದಲ್ಲಿ ಸುದರ್ಶನ್ ಭಟ್ ಬೆದ್ರಡಿ ಹಾಗು ಕ್ರೀಡಾ ಕ್ಷೇತ್ರದಲ್ಲಿ ಶರಣ್ಯ ಕೂಡ್ಲು ಅವರಿಗೆ ರಂಗಚಿನ್ನಾರಿ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ 7 ರಿಂದ ಸುರತ್ಕಲ್‍ನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯಿಂದ ನಾಟ್ಯ ವೈವಿಧ್ಯ ನಡೆಯಲಿದೆ ಎಂದು ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಕೆ.ಸತ್ಯನಾರಾಯಣ, ಕೆ.ಸತೀಶ್ಚಂದ್ರ ಭಂಡಾರಿ, ಮನೋಹರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.