ನವದೆಹಲಿ: 1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್), ದೈತ್ಯ ಬಾಹ್ಯಾಕಾಶ ಶಿಲೆ (ಕ್ಷುದ್ರಗ್ರಹ) 388945 (2008 TZ3) ಭೂಮಿಯತ್ತ ಧಾವಿಸುತ್ತಿದ್ದು, ಮೇ 16 ರಂದು ಮುಂಜಾನೆ 2.48 ಕ್ಕೆ ನಮ್ಮ ಗ್ರಹಕ್ಕೆ ಸಮೀಪಿಸಲಿದೆ. ಈ ಕ್ಷುದ್ರಗ್ರಹವು 1,608 ಅಡಿ ಅಗಲವಿದೆ ಎಂದು ನಾಸಾ ಹೇಳಿದೆ. ನ್ಯೂಯಾರ್ಕ್ ನ ಐಕಾನಿಕ್ ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಹೋಲಿಸಿದರೆ, ಈ ಕ್ಷುದ್ರಗ್ರಹವು 1,454 ಅಡಿಗಳಷ್ಟು ಎತ್ತರದಲ್ಲಿದೆ. ಇದು ಐಫೆಲ್ ಟವರ್‌ಗಿಂತಲೂ ದೊಡ್ಡದಾಗಿದೆ ಮತ್ತು ಲಿಬರ್ಟಿ ಪ್ರತಿಮೆಗಿಂತ ಉದ್ದವಿದೆ. ಬಾಹ್ಯಾಕಾಶ ಬಂಡೆಯು ಭೂಮಿಗೆ ಅಪ್ಪಳಿಸಿದರೆ ಭಾರೀ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದೆ.
ಭೂಮಿಗೆ ಆತಂಕವಿಲ್ಲ ಎಂದ ನಾಸಾ
ಈ ಬೃಹತ್ ಕ್ಷುದ್ರಗ್ರಹ ಭೂಮಿಯತ್ತ ಧಾವಿಸುತ್ತಿದೆಯಾದರೂ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳ ಲೆಕ್ಕಾಚಾರದಂತೆ ಇದು ಸುಮಾರು 2.5 ಮಿಲಿಯನ್ ಮೈಲುಗಳಷ್ಟು ದೂರದಿಂದ ನಮ್ಮನ್ನು ಹಾದುಹೋಗುತ್ತದೆ ಎಂದು ಹೇಳಿದ್ದಾರೆ. ಇದು ದೊಡ್ಡ ದೂರ ಎಂದು ಹೇಳಬಹುದಾದರೂ, ಬಾಹ್ಯಾಕಾಶ ಪರಿಭಾಷೆಯಲ್ಲಿ ಅದು ಅಲ್ಲ. ಮತ್ತು ಅದಕ್ಕಾಗಿಯೇ, ನಾಸಾ ಇದನ್ನು "ಹತ್ತಿರದ ವಿಧಾನ" ಎಂದು ಹೇಳಿದೆ.
ಕ್ಷುದ್ರಗ್ರಹದ ಭೂಮಿ ಭೇಟಿ ಇದೇ ಮೊದಲೇನಲ್ಲ
ಈ 388945 ಕ್ಷುದ್ರಗ್ರಹದ ಭೂಮಿ ಪ್ರಯಾಣ ಇದೇ ಮೊದಲೇನಲ್ಲ.. ಈ ಹಿಂಗೆ ಇದು ಮೇ 2020 ರಲ್ಲಿ ಭೂಮಿಗೆ ಬಹಳ ಸಮೀಪದಲ್ಲಿ ಅಂದರೆ 1.7 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದುಹೋಗಿತ್ತು. ಬಾಹ್ಯಾಕಾಶ ವಿಜ್ಞಾನಿಗಳ ಪ್ರಕಾರ ಪ್ರತಿ ಎರಡು ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಸುತ್ತುತ್ತಿರುವಾಗ ಈ ಬಾಹ್ಯಾಕಾಶ ಶಿಲೆ ಅಥವಾ ಕ್ಷುದ್ರಗ್ರಹವು ಭೂಮಿಯನ್ನು ಹಾದುಹೋಗುತ್ತದೆ. ಮುಂದಿನ ಬಾರಿ ಅದು ಮೇ 2024 ರಲ್ಲಿ ಭೂಮಿಯ ಹತ್ತಿರ ಹಾದುಹೋಗುತ್ತದೆ. ಆಗ ಇದು ಹೆಚ್ಚು ದೂರ ಅಂದರೆ 6.9 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದು ಹೋಗಲಿದೆ. ಬಳಿಕ ಈ ಕ್ಷುದ್ರಗ್ರಹವು 2163ರ ಮೇ ತಿಂಗಳಲ್ಲಿ ಮತ್ತೆ ಭೂಮಿಗೆ ಹತ್ತಿರ ಬರಲಿದೆ.
ಕ್ಷುದ್ರಗ್ರಹ ಅಪಾಯಕಾರಿಯೇ?
ನಾಸಾ ಮಾಹಿತಿ ಪ್ರಕಾರ, ಈ ಕ್ಷುದ್ರಗ್ರಹವು 4.65 ಮಿಲಿಯನ್ ಮೈಲುಗಳ ಒಳಗೆ ಬಂದರೆ ಮತ್ತು ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿದ್ದರೆ ಅದನ್ನು "ಸಂಭಾವ್ಯ ಅಪಾಯಕಾರಿ" ಕ್ಷುದ್ರಗ್ರಹ ಎಂದು ಪರಿಗಣಿಸಲಾಗುತ್ತದೆ. ಕ್ಷುದ್ರಗ್ರಹಗಳು ಬಾಹ್ಯಾಕಾಶ ಶಿಲಾಖಂಡರಾಶಿಗಳಾಗಿವೆ, ಈ ಕ್ಷುದ್ರಗ್ರಹದ ಅವಶೇಷಗಳು, ಅವು ವಿಶಾಲವಾಗಿ, ಅನಂತವಾದ ಬಾಹ್ಯಾಕಾಶದಲ್ಲಿ ತಿರುಗುತ್ತಿರುತ್ತವೆ. ಕೆಲವು ಬೃಹತ್ ಬಾಹ್ಯಾಕಾಶ ಬಂಡೆಗಳು ಭೂಮಿಗೆ ಅಪಾಯಕಾರಿ ಎಂದು ವಿಜ್ಞಾನಿಗಳು ದಶಕಗಳಿಂದ ಎಚ್ಚರಿಸುತ್ತಾ ಬಂದಿದ್ದಾರೆ.
ಭೂಮಿ ರಕ್ಷಣೆಗೆ ನಾಸಾ ಸೇರಿದಂತೆ ವಿವಿಧ ಬಾಹ್ಯಾಕಾಶ ಸಂಸ್ಥೆಗಳಿಂದ ಯೋಜನೆ
ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಣೆಗೆ ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಈ ಅಪಾಯಕಾರಿ ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸಲು ಯೋಜನೆಯನ್ನು ರೂಪಿಸುತ್ತಿವೆ. ಈ ಯೋಜನೆಯ ಭಾಗವಾಗಿ, NASA ಇತ್ತೀಚೆಗೆ ತನ್ನ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART) ಮಿಷನ್ ಅನ್ನು ಪ್ರಾರಂಭಿಸಿತು. ಭೂಮಿಯ ಕಡೆಗೆ ಹೋಗುವ ಕ್ಷುದ್ರಗ್ರಹವನ್ನು ಅದರ ಮಾರ್ಗದಿಂದ "ಚಲನಾ ಪ್ರಭಾವದ ಮೂಲಕ" ತಿರುಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದರರ್ಥ DART ಕ್ರಾಫ್ಟ್ ಕ್ಷುದ್ರಗ್ರಹದೊಂದಿಗೆ ಡಿಕ್ಕಿಹೊಡೆದು ಅದನ್ನು ತನ್ನ ಪಥದಿಂದ ಮರಳಿಸುವುದಾಗಿದೆ ಎಂದು ನಾಸಾ ಹೇಳಿದೆ.