ಮುಳ್ಳೇರಿಯ: ಬೆಳ್ಳೂರು ಶ್ರೀಮಹಾವಿಷ್ಣು ದೇವಸ್ಥಾನದ ಶ್ರೀವಿಷ್ಣು ಮಂಟಪದಲ್ಲಿ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಮೇ.16 ರಿಂದ 18ರ ವರೆಗೆ ಯಕ್ಷ ತ್ರಿವೇಣಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 6.30 ರಿಂದ ರಾತ್ರಿ 11ರ ವರೆಗೆ ಪ್ರದರ್ಶನ ನಡೆಯಲಿದೆ. 16 ರಂದು ತ್ರಿಪುರ ಮಥನ, 17 ರಂದು ಶ್ವೇತ ವರಾಹ, 18 ರಂದು ವೀರ ವೀರೇಶ ಆಖ್ಯಾಯಿಕೆಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.