ಕಾಸರಗೋಡು: ಹದಿನಾಲ್ಕನೇ ಪಂಚವಾರ್ಷಿಕ ಯೋಜನೆಯ ಅಂಗವಾಗಿ ಮೇ 16ರಿಂದ 27ರವರೆಗೆ ನಗರಸಭೆಗಳಲ್ಲಿ ಯೋಜನಾ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಲು ಸರ್ಕಾರ ಸೂಚಿಸಿದೆ. ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಕಾರ್ಯಸೂಚಿ ಮತ್ತು ವಿವರಗಳನ್ನು ಆದೇಶದಲ್ಲಿ ಸ್ಪಷ್ಟಪಡಿಸಲಗಿದ್ದು, ಈ ನಿಟ್ಟಿನಲ್ಲಿ ಹಿಂದಿನ ವಾರ್ಷಿಕ ಯೋಜನೆ ಅನುಷ್ಠಾನ, ಪ್ರಸ್ತುತ ವಾರ್ಷಿಕ ಯೋಜನೆ ಅನುಷ್ಠಾನ ಪ್ರಗತಿ, ಮುಂದಿನ ವಾರ್ಷಿಕ ಯೋಜನೆಗೆ ಕರಡು ಪ್ರಸ್ತಾವನೆಗಳನ್ನು ಚರ್ಚಿಸಿ ಶಿಫಾರಸುಗಳನ್ನು ಸಿದ್ಧಪಡಿಸಲಾಗುವುದು. ಹಿಂದಿನ ವಾರ್ಷಿಕ ಯೋಜನೆಯಲ್ಲಿ ಕೈಗೊಂಡಿರುವ ಯೋಜನೆಗಳು, ಪ್ರಸಕ್ತ ವಾರ್ಷಿಕ ಯೋಜನೆಯ ಪರಿಶೀಲನೆ ಹಾಗೂ ಕ್ರಿಯಾಯೋಜನೆಗಳ ಕರಡು ಯೋಜನೆ ಪ್ರಸ್ತಾವನೆಗಳನ್ನು ಮುದ್ರಿಸಿ ಗ್ರಾಮಸಭೆ, ಗ್ರಾ.ಪಂ., ವಾರ್ಡ್‍ಗಳಿಗೆ ವಿತರಿಸಲು ಸರಕಾರ ಸೂಚಿಸಿರುವುದಾಗಿ ಜಿಲ್ಲಾ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.