ತಿರುವನಂತಪುರ: ತನ್ನ 10 ವರ್ಷ ಹರೆಯದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ತಂದೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ತಿರುವನಂತಪುರ ಪೋಕ್ಸೋ ನ್ಯಾಯಾಲಯವು ಉಪ ತಹಸೀಲ್ದಾರ್‍ಗೆ 17 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 16.5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿ ನ್ಯಾಯ ಎತ್ತಿಹಿಡಿಯಿತು.
ಕೆಟ್ಟ ಸನ್ನಿವೇಶವು 2019 ರಲ್ಲಿ ನಡೆದಿತ್ತು. ಪ್ರಕರಣದಲ್ಲಿ ಮಲಗಿದ್ದ ಪತ್ರಿಗೆ ತಹಶೀಲ್ದಾರ್ ಆಗಿದ್ದ ತಂದೆ ಕಿರುಕುಳ ನೀಡಿದ್ದ. ಶಿಕ್ಷಕರೊಬ್ಬರು ನೀಡಿದ ದೂರಿನ ಮೇರೆಗೆ ಮಗಳ ಮೇಲಿನ ದೌರ್ಜನ್ಯದ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪಾಂಗೋಡು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಾಸಿಕ್ಯೂಷನ್ 19 ಸಾಕ್ಷಿಗಳನ್ನು ವಿಚಾರಣೆ ನಡೆಸಿತು. 21 ದಾಖಲೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಅಪರಾಧ ವಿಭಾಗದ ಉಪ ಅಧೀಕ್ಷಕ ಎ. ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿದೆ.