HEALTH TIPS

ಲ್ಯಾಪ್ ಟ್ಯಾಪ್ ಇಲ್ಲದೇ ಪ್ರಧಾನಿ ಕಾರ್ಯಕ್ರಮ ಪ್ರಸಾರ ಮಾಡುವಲ್ಲಿ ವಿಫಲ; ಪಿಟಿವಿಯ 17 ಮಂದಿ ಅಮಾನತು

           ಇಸ್ಲಾಮಾಬಾದ್: ಸುಧಾರಿತ ಲ್ಯಾಪ್‌ಟಾಪ್ ಇಲ್ಲದೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಲಾಹೋರ್ ಭೇಟಿಯ ಕಾರ್ಯಕ್ರಮ ಪ್ರಸಾರ ಮಾಡುವಲ್ಲಿ ವಿಫಲರಾದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಿಟಿವಿಯ 17 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.


           ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಕಳೆದ ವಾರ ಲಾಹೋರ್‌ನ ಕೋಟ್ ಲಖ್ಪತ್ ಜೈಲು ಮತ್ತು ರಂಜಾನ್ ಬಜಾರ್‌ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪಿಟಿವಿಯ ಸಿಬ್ಬಂದಿ ಕಾರ್ಯಕ್ರಮವನ್ನು ಚಿತ್ರೀಕರಿಸಿ ಅದನ್ನು ಫೈಲ್ ಟ್ರಾನ್ಸ್ ಫರ್ ಪ್ರೋಟೋಕಾಲ್ (ಎಫ್‌ಟಿಪಿ) ಮೂಲಕ ವೀಡಿಯೊ ತುಣುಕನ್ನು ಅಪ್‌ಲೋಡ್ ಮಾಡಲು ವಿಫಲರಾಗಿದ್ದರು. ಅಗತ್ಯವಾದ ಸುಧಾರಿತ ಲ್ಯಾಪ್‌ಟಾಪ್ ಲಭ್ಯವಿಲ್ಲದ ಕಾರಣ ಈ ಸಮಸ್ಯೆ ಏರ್ಪಟ್ಟಿತ್ತು. ಹೀಗಾಗಿ ಕಾರ್ಯಕ್ರಮ ಪಿಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಪಾಕಿಸ್ತಾನ ಟೆಲಿವಿಷನ್ (ಪಿಟಿವಿ) ತಂಡವು ಸರಿಯಾದ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಸಂಸ್ಥೆಯ 17 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

        ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಪ್ರಕಾರ, ವರದಿಗಾರರು ಮತ್ತು ನಿರ್ಮಾಪಕರನ್ನು ಒಳಗೊಂಡ ವಿವಿಐಪಿ ತಂಡವು ಪ್ರಧಾನ ಮಂತ್ರಿಯ ಕವರೇಜ್ ಜವಾಬ್ದಾರಿಯನ್ನು ಹೊಂದಿದೆ. ಆ ತಂಡವು ಆಧುನಿಕ ಗ್ಯಾಜೆಟ್‌, ಲೈವ್ ಸ್ಟ್ರೀಮಿಂಗ್‌ಗಾಗಿ ಲ್ಯಾಪ್‌ಟಾಪ್‌ಗಳನ್ನು ಹೊಂದಿದ್ದು, ಪ್ರಧಾನಮಂತ್ರಿಯವರ ಕಾರ್ಯಕ್ರಮಗಳ ಪ್ರಸಾರದ ಜವಾಬ್ದಾರಿ ತಂಡದ ಸದಸ್ಯರ ಮೇಲಿರುತ್ತದ್ದೆ ಎನ್ನಲಾಗಿದೆ. ಈ ಪ್ರಮುಖ ತಂಡವು ಇಸ್ಲಾಮಾಬಾದ್‌ನಲ್ಲಿ ನೆಲೆಸಿದ್ದು, ದೇಶ ಮತ್ತು ವಿದೇಶದಾದ್ಯಂತ ಪ್ರಧಾನಿಯ ಕಾರ್ಯಕ್ರಮಗಳಿಗೆ ಪ್ರವಾಸ ಮಾಡುತ್ತದೆ. ಪ್ರಧಾನಿ ಭೇಟಿಯ ಬಗ್ಗೆ ಪಿಟಿವಿ ಲಾಹೋರ್ ಕೇಂದ್ರವು  ಸುಧಾರಿತ ಲ್ಯಾಪ್‌ಟಾಪ್ ನೀಡುವಂತೆ ಪಿಟಿವಿ ಪ್ರಧಾನ ಕಚೇರಿಯನ್ನು ಕೇಳಿತ್ತು. ಈ ಹಿಂದೆ ಏಪ್ರಿಲ್ 18 ರಂದು, ಲಾಹೋರ್ ಕೇಂದ್ರವು ಪ್ರಧಾನ ಕಚೇರಿಗೆ ಪತ್ರ ಬರೆದಿತ್ತು. “ಲಾಹೋರ್ ಕೇಂದ್ರದಲ್ಲಿ ನಮಗೆ ಯಾವುದೇ ಲ್ಯಾಪ್‌ಟಾಪ್ ಎಡಿಟಿಂಗ್ ಸೌಲಭ್ಯವಿಲ್ಲದ ಕಾರಣ, ನಾವು ಎಡಿಟಿಂಗ್ ಸೌಲಭ್ಯ ಹೊಂದಿರುವ ದಿಗೆ ಲ್ಯಾಪ್‌ಟಾಪ್ ಅನ್ನು ಬಾಡಿಗೆಗೆ ಪಡೆದಿದ್ದೇವೆ . ಆದರೆ ಶಾಶ್ವತ ಪರಿಹಾರವಾಗಿ ನಾವು ಕೇಂದ್ರದಲ್ಲಿ ಇಂತಹದೇ ಸೌಲಭ್ಯವನ್ನು ಹೊಂದಿರಬೇಕು” ಎಂದು ಉಲ್ಲೇಖಿಸಿತ್ತು.

            ಆದರೆ, ಸರ್ಕಾರಿ ಟಿವಿ ಈ ಬಗ್ಗೆ ಗಮನಹರಿಸದೆ ಮತ್ತೊಬ್ಬರನ್ನು ನೇಮಿಸಿಕೊಳ್ಳುವಂತೆ ಸೂಚಿಸಿತ್ತು. ಈ ಸಂದರ್ಭದಲ್ಲಿ ಲಾಹೋರ್ ಕೇಂದ್ರವು ಅಧಿಕಾರಿಯೊಬ್ಬರ ವೈಯಕ್ತಿಕ ಲ್ಯಾಪ್‌ಟಾಪ್ ಅನ್ನು ವ್ಯವಸ್ಥೆಗೊಳಿಸಿತು. ಕವರೇಜ್ ನಂತರ ತಂಡವು ತುಣುಕನ್ನು ರವಾನಿಸಲು ಪ್ರಯತ್ನಿಸಿದಾಗ ಲ್ಯಾಪ್‌ಟಾಪ್‌ನ ಬ್ಯಾಟರಿ ಬರಿದಾಗಿರುವುದು ಕಂಡುಬಂತು. ಮರುದಿನ, ಪಿಟಿವಿ ಆಡಳಿತವು ವಿವಿಐಪಿ ಕವರೇಜ್ ಉಪ ನಿಯಂತ್ರಕ ಇಮ್ರಾನ್ ಬಶೀರ್ ಖಾನ್ ಸೇರಿದಂತೆ ಒಟ್ಟು 17 ಅಧಿಕಾರಿಗಳನ್ನು ಅಮಾನತುಗೊಳಿಸಿತು. ಅಲ್ಲದೆ, ನಿರ್ಲಕ್ಷ್ಯದ ಆರೋಪದ ಮೇಲೆ ಆಡಳಿತವು ವಿವಿಧ ಎಂಜಿನಿಯರ್‌ಗಳು ಮತ್ತು ಕ್ಯಾಮೆರಾಮೆನ್‌ಗಳನ್ನು ಅಮಾನತುಗೊಳಿಸಿದೆ.

            ಅಮಾನತುಗೊಂಡಿರುವ ನೌಕರರು ದೊಡ್ಡವರನ್ನು ಉಳಿಸುವ ಸಲುವಾಗಿ ಹಿಂದಿನ ಆಡಳಿತವು ನೇಮಿಸಿದ ಆಡಳಿತದಿಂದ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries