ಲಖನೌ: ಏಳು ವರ್ಷದ ಬಾಲಕಿಯ ತಾಯಿಯೊಬ್ಬಳು 2021ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ177ನೇ ರ್‍ಯಾಂಕ್ ಪಡೆಯುವ ಮೂಲಕ ಮಹಿಳಾ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಹಾಫುರ್ ನ ಪಿಲ್ಖುವಾ ನಿವಾಸಿ ಶಿವಾಂಗಿ ಗೋಯಲ್ ಅವರು ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಗೌರವ ತಂದಿದ್ದಾರೆ.
ಶಿವಾಂಗಿ ಮದುವೆಯಾಗಿದ್ದು, ಮಗಳಿದ್ದಾಳೆ. ಅತ್ತೆ-ಮಾವಂದಿರ ಕಿರುಕುಳದಿಂದ ಬೇಸತ್ತ ಆಕೆ ತನ್ನ ತಂದೆ- ತಾಯಿಯೊಂದಿಗೆ ವಾಸಿಸತೊಡಗಿದಳು. ಆಕೆ. ವಿಚ್ಚೇದನ ಅರ್ಜಿ ಕೂಡಾ ಇನ್ನೂ ಕೋರ್ಟ್ ನಲ್ಲಿದೆ.
ಮಾಜದಲ್ಲಿರುವ ವಿವಾಹಿತ ಮಹಿಳೆಯರಿಗೆ ತಮ್ಮ ಅತ್ತೆಯ ಮನೆಯಲ್ಲಿ ಏನಾದರೂ ತೊಂದರೆಯಾದರೆ ಭಯಪಡಬೇಡಿ. ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ನೀಡಲು ಬಯಸುತ್ತೇನೆ. ಕಷ್ಟಪಟ್ಟು ಚೆನ್ನಾಗಿ ಓದಿದರೆ ಐಎಎಸ್ ಆಗಬಹುದು ಎಂದು ಶಿವಾಂಗಿ ತನ್ನ ಅನುಭವ ಹಂಚಿಕೊಂಡಿದ್ದಾರೆ.
ಮದುವೆಗೂ ಮುನ್ನವೇ ಐಐಎಸ್ ಆಗಬೇಕೆಂಬ ಆಸೆ ಇತ್ತು. ಎರಡು ಬಾರಿ ಪ್ರಯತ್ನಿಸಿ ವಿಫಲಳಾದೆ. ನಂತರ ಮಾದುವೆಯಾಯಿತು. ತನ್ನ ಅತ್ತೆಯಿಂದ ಕೌಟುಂಬಿಕ ಹಿಂಸೆ ಅನುಭವಿಸಿದ ಕಾರಣ, ತನ್ನ ಏಳು ವರ್ಷದ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಮರಳಿದೆ. ನಂತರ ತಮ್ಮ ತಂದೆಯ ಪ್ರೋತ್ಸಾಹದಿಂದ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದೆ ಎಂದು ಅವರು ಹೇಳಿದ್ದಾರೆ.