ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲ ಬಳಿಯ ಕಾನಮಠ ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ಜೀರ್ಣೋದ್ದಾರ ಮಹಾ ಸಂಕಲ್ಪ ಸಮಾರಂಭ ಮೇ.17 ಹಾಗೂ 18 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮೇ.17 ರಂದು ಸಂಜೆ 5ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಮಂಟಪ ಸಂಸ್ಕಾರ, ಅರಣೀ ಮಥನ, 7.30 ರಿಂದ ಶ್ರೀಶಂಕರನಾರಾಯಣ ದೇವರಿಗೆ ಕಾರ್ತಿಕ ಪೂಜೆ, ಅತ್ತಾಳ ಪೂಜೆ ನಡೆಯಲಿದೆ.
ಮೇ.18 ರಂದು ಪ್ರಾತಃಕಾಲ 5 ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ತ್ರಿಕಾಲ ಪೂಜಾರಂಭ, ದೀಪ ಪ್ರಜ್ವಲನೆ, 6.15 ಕ್ಕೆ ತ್ರಿಕಾಲ ಪೂಜೆಯ ಬೆಳಗ್ಗಿನ ಮಂಗಳಾರತಿ, 7 ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಶತರುದ್ರಾಭಿಷೇಕ ಪ್ರಾರಂಭ, 9 ಕ್ಕೆ ಅಷ್ಟೋತ್ತರ ಶತ ನಾರೀಕೇಳ ಮಹಾಗಣಪತಿ ಹವನ ಪ್ರಾರಂಭ, 11.30 ಕ್ಕೆ ಮಹಾಪೂರ್ಣಾಹುತಿ, 12ಕ್ಕೆ ತ್ರಿಕಾಲ ಪೂಜೆಯ ಮಧ್ಯಾಹ್ನದ ಮಂಗಳಾರತಿ, 12.20 ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಮಹಾ ಮಂಗಳಾರತಿ, 12.30 ಕ್ಕೆ ಸಾಮೂಹಿಕ ಪ್ರಾರ್ಥನೆ, 12.50 ಕ್ಕೆ ಅನ್ನಸಮತರ್ಪಣೆ, ಸಂಜೆ 4.30 ಕ್ಕೆ ತ್ರಿಕಾಲ ಪೂಜಾರಂಭ, 6.15 ಕ್ಕೆ ದೀಪಾರಾಧನೆ, 7.15 ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಮಹಾಮಂಗಳಾರತಿ, 7.30 ಕ್ಕೆ ತ್ರಿಕಾಲಪೂಜೆ, ರಾತ್ರಿ ಮಂಗಳಾರತಿ, 8ಕ್ಕೆ ಅಷ್ಠಾವಧಾನ ಸೇವೆ ಆರಂಭ, 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದ ಭಾಗವಾಗಿ ಸಂಜೆ 5 ಕ್ಕೆ ಶ್ರೀಧೂಮಾವತಿ ಸನ್ನಿಧಿಯಲ್ಲಿ ತಂಬಿಲ, 6.30 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ.