ಅಡೂರು: ಕೆ ಎಸ್ ಆರ್ ಟಿ ಸಿ ಮತ್ತೆ ಸುದ್ದಿಯಲ್ಲಿದೆ. ಕಂಡಕ್ಟರ್ ಇಲ್ಲದೆ ಕೊಟ್ಟಾರಕ್ಕರ ನಿಲ್ದಾಣದಿಂದ ಹೊರಟ ಬಸ್ 18 ಕಿ.ಮೀ ಸಂಚರಿಸಿದ್ದು ಇತ್ತೀಚಿನ ಘಟನೆ. ನಿನ್ನೆ ಬೆಳಗ್ಗೆ ಚಾಲಕ ಕಂಡಕ್ಟರ್ ಹತ್ತಿರುವನೇ ಎಂಬುದನ್ನೂ ಗಮನಿಸಿದೆ ಕೊಟ್ಟಾರಕ್ಕರ ನಿಲ್ದಾಣದಿಂದ ಬಸ್ಸಿನೊಂದಿಗೆ ತನ್ನ ಪ್ರಯಾಣವನ್ನು ಮುಂದುವರೆಸಿದನು. ಕಳೆದ ವಾರ ಮಾನಸಿಕ ಅಸ್ವಸ್ಥನೊಬ್ಬ ಸೂಪರ್‍ಫಾಸ್ಟ್ ಬಸ್‍ನೊಂದಿಗೆ ಆಲುವಾ ಸ್ಟ್ಯಾಂಡ್ ನಿಂದ ಬಸ್ಸೊಂದನ್ನು ಕೊಂಡೊಯ್ದಿದ್ದ.
ತಿರುವನಂತಪುರಂನಿಂದ ಮೂಲಮಟ್ಟಂಗೆ ಬಸ್‍ನ ಚಾಲಕ ತಪ್ಪಾಗಿ ಕಂಡಕ್ಟರ್ ಇರುವನೆಂದೇ ಭಾವಿಸಿ ಬಸ್ ಚಲಾಯಿಸಿಕೊಂಡು ಸಂಚರಿಸಿದನು. ಪ್ರಯಾಣಿಕರೊಬ್ಬರು ಗಂಟೆ ಬಾರಿಸಿದಾಗ ಚಾಲಕ ಬಸ್ ನೊಳಗಿರುವನೆಂದು ಚಾಲಕ ಭಾವಿಸಿದ್ದ. ಅಡೂರ್ ನಿಲ್ದಾಣ ತಲುಪುವ ಮುನ್ನವೇ ಚಾಲಕನಿಗೆ ಕಂಡಕ್ಟರ್ ಹತ್ತÀದಿರುವುದು ಗಮನಕ್ಕೆ ಬಂತು.
ಕೊಟ್ಟಾರಕ್ಕರ ಸ್ಟ್ಯಾಂಡ್ ತಲುಪಿದಾಗ ಕಂಡಕ್ಟರ್ ಮತ್ತು ಕೆಲವು ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಇಳಿದಿದ್ದರು. ಸ್ವಲ್ಪ ಸಮಯದ ನಂತರ, ಒಬ್ಬ ಪ್ರಯಾಣಿಕ ಗಂಟೆ ಬಾರಿಸಿದ. ಇದರೊಂದಿಗೆ ಚಾಲಕ ಸಹಜವಾಗಿಯೇ ವಾಹನ ಸಮೇತ ಸ್ಟ್ಯಾಂಡ್ ಬಿಟ್ಟು ಬಸ್ ಚಲಾಯಿಸಿದ. ಸುಮಾರು 18 ಕಿ.ಮೀ ಹೋದ ನಂತರ ಚಾಲಕನಿಗೆ ಪ್ರಮಾದದ ಅರಿವಾಯಿತು.
ಘಟನೆ ತಿಳಿಯುತ್ತಿದ್ದಂತೆ ಅಡೂರ್ ಡಿಪೆÇೀ ಅಧಿಕಾರಿಗಳು ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಮೂರೂವರೆ ತಾಸಿನ ನಂತರ ಕಂಡಕ್ಟರ್ ಮತ್ತೊಂದು ಬಸ್ ಹತ್ತಿ ಅಡೂರ್ ತಲುಪಿ ಮೂಲಮಟ್ಟಂಗೆ ಹೊರಟರು. ಹೇಗಿದ್ದರೂ ಪ್ರಯಾಣಿಕರು ತಾಳ್ಮೆಯಿಂದ ಕಂಡಕ್ಟರ್ ಗಾಗಿ ಕಾಯುತ್ತಿದ್ದರು.