ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಮುನ್ನ ಜೂನ್ 5ರಂದು ಭಾರತ ಕ್ರಿಕೆಟ್ ತಂಡ ದೆಹಲಿಗೆ ತೆರಳಲಿದ್ದು, ಸರಣಿಯ ಮೊದಲ ಪಂದ್ಯ ಜೂನ್ 9 ರಂದು ಇಲ್ಲಿ ಆರಂಭವಾಗಲಿದೆ. ಇನ್ನು ಜೂನ್ 2ರಂದು ದಕ್ಷಿಣ ಆಫ್ರಿಕಾ ತಂಡ ಇಲ್ಲಿಗೆ ಆಗಮಿಸಲಿದೆ.
ಈ ಬಾರಿ ಸರಣಿಗೆ ಕೋವಿಡ್ -19 ಬಯೋ-ಬಬಲ್ ಇರುವುದಿಲ್ಲ ಹಾಗೂ ಜನಸಂದಣಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಸರಣಿಯೂ ಜೂನ್ 12ರಂದು ಕಟಕ್, ಜೂನ್ 14ರಂದು ವಿಶಾಖಪಟ್ಟಣಂ, ಜೂನ್ 17ರಂದು ರಾಜ್ ಕೋಟ್ ಮತ್ತು ಜೂನ್ 19ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.
ಟೀಂ ಇಂಡಿಯಾ ಜೂನ್ 5ರಂದು ಇಲ್ಲಿ ಸಮಾವೇಶಗೊಳ್ಳಲಿದ್ದು, ದಕ್ಷಿಣ ಆಫ್ರಿಕಾದವರು ಜೂನ್ 2ರಂದು ದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.