ಜಮ್ಮು: ಕಣಿವೆ ಪ್ರದೇಶದಲ್ಲಿ ನುಸುಳುವಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ 200 ಪಾಕಿಸ್ತಾನದ ಸೈನಿಕರು ಗಡಿ ದಾಟಿ ಜಮ್ಮು-ಕಾಶ್ಮೀರ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂದು ಉತ್ತರ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ತಿಳಿಸಿದ್ದಾರೆ.
ಫೆಬ್ರವರಿ 2021ರ ಒಪ್ಪಂದದ ನಂತರ ಇಂಡೋ-ಪಾಕ್ ಗಡಿಯಲ್ಲಿ ಕದನ ವಿರಾಮ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷ ಇಲ್ಲಿಯವರೆಗೆ 21 ವಿದೇಶಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದ ಭಯೋತ್ಪಾದಕರ ಸಂಖ್ಯೆ ಪ್ರತಿ ವರ್ಷವೂ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಭದ್ರತಾ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಂಡೋ- ಪಾಕ್ ಗಡಿಯಲ್ಲಿ ಸುಮಾರು 200 ಸೈನಿಕರು ಗಡಿ ದಾಟಿ ದೇಶದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದರು.
ಕಳೆದ 12 ತಿಂಗಳುಗಳಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಆದಾಗ್ಯೂ, ಗಡಿಯಲ್ಲಿ ಒಳನುಸುಳುವಿಕೆ ಕಂಡುಬರುತ್ತಿದೆ. ಆರು ಬೃಹತ್ ಉಗ್ರರ ಶಿಬಿರಗಳು ಮತ್ತು 29 ಕಿರು ಕ್ಯಾಂಪ್ ಗಳಿವೆ ಎಂದು ಅವರು ತಿಳಿಸಿದರು.