ಕೊಟ್ಟಾಯಂ: ಚಿತ್ರನಟ ಧರ್ಮಜನ್ ಒಡೆತನದ ಧರ್ಮಜನ್ ಫಿಶ್ ಹಬ್ ನಿಂದ ಹಳಸಿದ ಮೀನನ್ನು ವಶಪಡಿಸಿಕೊಳ್ಳಲಾಗಿದೆ. ಕೊಟ್ಟಾಯಂನ ಕಂಜಿಕುಝಿಯಲ್ಲಿರುವ ಮೀನು ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಂದ 200 ಕೆಜಿ ಹಳಸಿದ ಮೀನು ವಶಪಡಿಸಲಾಗಿದೆ.
ಮೀನುಗಾರಿಕೆ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ವತಿಯಿಂದ ಪರಿಶೀಲನೆ ನಡೆಸಲಾಯಿತು. ಹಿಡಿದ ಮೀನುಗಳು ನಾಶಪಡಿಸಲಾಗಿದೆ. ದಂಡ ಪಾವತಿಸುವಂತೆ ಆಹಾರ ಸುರಕ್ಷತಾ ಇಲಾಖೆಯೂ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.