ನವದೆಹಲಿ: 2020ರಲ್ಲಿ ದೇಶದಲ್ಲಿ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ದಾಖಲಾದ ಒಟ್ಟು 18.11 ಲಕ್ಷ ಸಾವಿನ ಪ್ರಕರಣಗಳಲ್ಲಿ, ಶೇ 42 ರಷ್ಟು ಮಂದಿ ಹೃದಯ ಕಾಯಿಲೆ, ರಕ್ತಹೀನತೆ ಮತ್ತು ಉಬ್ಬಸದಿಂದ ಮೃತಪಟ್ಟಿದ್ದಾರೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ತಯಾರಿಸಿದ ವರದಿಯಲ್ಲಿ ಹೇಳಲಾಗಿದೆ.
2020ರಲ್ಲಿ 1.60 ಲಕ್ಷ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇಂತಹ ಸಾವಿನ ಪ್ರಮಾಣ ಶೇ 9ರಷ್ಟಿದೆ ಎಂದೂ ತಿಳಿಸಲಾಗಿದೆ.
ಇದೇ ವರ್ಷ ಒಟ್ಟು ನೋಂದಾಯಿತ ಮರಣಗಳ ಸಂಖ್ಯೆ 81.15 ಲಕ್ಷ ಎಂದೂ ಹೇಳಿದೆ.
ರಕ್ತಪರಿಚಲನೆಗೆ ಸಂಬಂಧಿಸಿದ ರೋಗಗಳಿಂದ ಶೇ 32.1 ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಶೇ10ರಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದಿದೆ.
ಸೆಪ್ಟಿಸೆಮಿಯಾ, ಕ್ಷಯರೋಗ ರೋಗಗಳಿಂದ ಶೇ7.1, ಅಂತಸ್ರಾವ, ಪೌಷ್ಟಿಕಾಂಶ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ರೋಗಗಳಿಂದ ಶೇ 5.8ರಷ್ಟು, ಗಾಯ, ವಿಷಬಾಧೆ ಮೊದಲಾದ ಕಾರಣಗಳಿಂದ ಶೇ5.6 ರಷ್ಟು ಮಂದಿ ಹಾಗೂ ಶೇ 4.7 ರಷ್ಟು ಮಂದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದೂ ಹೇಳಿದೆ.
ಶೇ 5.7 ರಷ್ಟು ಶಿಶು ಮರಣಗಳು ಸಂಭವಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.