ನವದೆಹಲಿ: ಭಾರತದಲ್ಲಿ 2021-22 ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ದಾಖಲೆಯ ಏರಿಕೆ ಕಂಡಿದ್ದು, 83.57 ಬಿಲಿಯನ್ ಡಾಲರ್ ನಷ್ಟು ಬಂದಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಹೇಳಿದೆ.
ಉತ್ಪಾದನೆಯ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳಿಗೆ ಭಾರತ ಆದ್ಯತೆಯ ರಾಷ್ಟ್ರವಾಗಿದೆ ಎಂದು ಸಚಿವಾಲಯ ಹೇಳಿದೆ. 2021-22 ರಲ್ಲಿ ಭಾರತದಲ್ಲಿ ದಾಖಲಾಗಿರುವ ವಿದೇಶಿ ಹೂಡಿಕೆ ವಾರ್ಷಿಕವಾಗಿ ಹೂಡಿಕೆಯಾಗಿರುವುದರ ಪೈಕಿ ಗರಿಷ್ಠವಾಗಿದ್ದಾಗಿದೆ.
2021-22 ರಲ್ಲಿ ಉತ್ಪಾದನೆ ಕ್ಷೇತ್ರದಲ್ಲಿ ಎಫ್ ಡಿಐ ಈಕ್ವಿಟಿ ಇನ್ಫ್ಲೋ ಶೇ.76 ರಷ್ಟು ಏರಿಕೆಯಾಗಿದೆ. 2020-21 ರಲ್ಲಿ 12.09 ಬಿಲಿಯನ್ ನಷ್ಟಿತ್ತು.
ಅಗ್ರಮಾನ್ಯ ಹೂಡಿಕೆ ರಾಷ್ಟ್ರಗಳ ಪೈಕಿ ಸಿಂಗಪೂರ್ ಇದ್ದು, ಶೇ.27 ರಷ್ಟಿದೆ. ಅಮೆರಿಕ (ಶೇ.18 ರಷ್ಟು) ಹಾಗೂ ಮಾರಿಷಸ್ (ಶೇ.16 ರಷ್ಟು) ಹೂಡಿಕೆ ಮಾಡಿದೆ. ವಿವಿಧ ವಲಯಗಳ ಪೈಕಿ ಕಂಪ್ಯೂಟರ್ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಅತಿ ಹೆಚ್ಚು ಹೂಡಿಕೆಗಳನ್ನು ಆಕರ್ಷಣೆ ಮಾಡಿವೆ.