ಪುಣೆ: 2022ರ ಐಪಿಎಲ್ ಟೂರ್ನಿಯಲ್ಲಿ 9ನೇ ಗೆಲುವು ಸಾಧಿಸಿರುವ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿತ್ತು. ಇನ್ನು 145 ರನ್ ಗಳ ಗುರಿ ಬೆನ್ನಟ್ಟಿದ ಲಖನೌ ಸೂಪರ್ಗೈಂಟ್ಸ್ ತಂಡ 82 ರನ್ ಗಳಿಗೆ ಆಲೌಟ್ ಆಗಿದ್ದು 62 ರನ್ ಗಳಿಂದ ಗುಜರಾತ್ ಗೆ ಶರಣಾಯಿತು.
ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ ಅಜೇಯ 63, ಡೇವಿಡ್ ಮಿಲ್ಲರ್ 26, ರಾಹುಲ್ ತೇವಾಟಿಯ ಅಜೇಯ 22 ರನ್ ಬಾರಿಸಿದ್ದಾರೆ.
ಲಖನೌ ಪರ ಡಿ ಕಾಕ್ 11, ದೀಪಕ್ ಹೂಡಾ 27, ಅವೇಶ್ ಖಾನ್ 12 ರನ್ ಬಾರಿಸಿದ್ದಾರೆ.
ಗುಜರಾತ್ ಪರ ಬೌಲಿಂಗ್ ನಲ್ಲಿ ರಶೀದ್ ಖಾನ್ 4, ಯಶ್ ದಯಾಳ್ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದಿದ್ದಾರೆ.