ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ 2022ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 54 ರನ್ ಗಳಿಂದ ಗೆಲುವು ಸಾಧಿಸಿದೆ.
ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿದ್ದು ಆರ್ ಸಿಬಿ ಗೆ ಬೃಹತ್ ಮೊತ್ತದ ಗುರಿ ನೀಡಿತ್ತು.
ಪಂಜಾಬ್ ನೀಡಿದ 210 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಲು ಅಷ್ಟೇ ಸಾಧ್ಯವಾಗಿದ್ದು 54 ರನ್ ಗಳಿಂದ ಸೋಲು ಅನುಭವಿಸಿದೆ.
ಪಂಜಾಬ್ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಜಾನಿ ಬೈರ್ಸ್ಟೋವ್ 66, ಶಿಖರ್ ಧವನ್ 21, ಲಿವಿಂಗ್ಸ್ಟೋನ್ 70 ಮತ್ತು ಮಾಯಾಂಕ್ ಅಗರವಾಲ್ 19 ರನ್ ಬಾರಿಸಿದ್ದಾರೆ.
ಆರ್ ಸಿಬಿ ಪರ ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ 4, ವನಿಂದು ಹಸರಂಗ 2, ಮ್ಯಾಕ್ಸ್ ವೆಲ್ ಮತ್ತು ಶಾಹಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.
ಆರ್ ಸಿಬಿ ಪರ ವಿರಾಟ್ ಕೊಹ್ಲಿ 20 ರನ್, ರಜತ್ ಪಾಟಿದಾರ್ 26, ಮ್ಯಾಕ್ಸ್ ವೆಲ್ 35 ರನ್ ಬಾರಿಸಿದ್ದಾರೆ.