ಕಾಸರಗೋಡು: ಪಡನ್ನಕ್ಕಾಡ್ ಕೃಷಿ ಕಾಲೇಜು ಆಯೋಜಿಸಿರುವ 'ಮ್ಯಾಂಗೋ ಫೆಸ್ಟ್ -2022' ಗುರುವಾರ ಆರಂಭಗೊಂಡಿತು. ಕೃಷಿ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಮ್ಯಾಂಗೋ ಫೆಸ್ಟ್ ಅನ್ನು ಶಾಸಕ ಇ ಚಂದ್ರಶೇಖರನ್ ಉದ್ಘಾಟಿಸಿದರು. ಪಡನ್ನಕ್ಕಾಡ್ ಕೃಷಿ ವಿಶ್ವವಿದ್ಯಾನಿಲಯ ಮತ್ತು ಪತ್ತನಂತಿಟ್ಟದ ಕೃಷಿ ಕಾಲೇಜು ನಡೆಸುತ್ತಿರುವ ಚಟುವಟಿಕೆಗಳು ಕೇರಳದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಮತ್ತು ಮಾವಿನಿಂದ ತಯಾರಿಸಿದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಗೆ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ)ದ ನಿರ್ದೇಶಕ ಡಾ. ಅನಿತಾ ಕರುಣ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ಕೃಷಿ ಜ್ಞಾನದ ಪ್ರಕಟಣೆಗಳ ಪ್ರಕಟಣೆ, ಸಮುದಾಯ ಗ್ರಂಥಾಲಯದ ಪುಸ್ತಕಗಳ ವಿತರಣೆ, ನ್ಯೂಟ್ರಿಕಿಟ್‍ಗಳ ವಿತರಣೆ, ಮೈಕ್ರೋಸಾಲ್ ಮೈಕ್ರೋ ಮಾಲಿಕ್ಯುಲರ್ ಡಿಸ್ಟ್ರಿಬ್ಯೂಷನ್ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ನಡೆಯಿತು. ನೀಲೇಶ್ವರಂ ನಗರಸಭೆ ಅಧ್ಯಕ್ಷ ಟಿ. ವಿ. ಶಾಂತಾ, ಕಾಞಂಗಾಡ್ ನಗರಸಭೆಯ ವಾರ್ಡ್ ಕೌನ್ಸಿಲರ್ ವಿ.ವಿ.ಶೋಭಾ, ನೀಲೇಶ್ವರಂ ನಗರಸಭೆಯ ವಾರ್ಡ್ ಕೌನ್ಸಿಲರ್ ಕೆ. ಪ್ರೀತಾ, ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಆರ್ ವೀಣಾರಾಣಿ, ತೆಂಗು ಮಿಷನ್ ಸಹ ನಿರ್ದೇಶಕಿ ಆರ್ ಸುಜಾತ, ಉತ್ತರ ವಲಯದ ಸಹ ನಿರ್ದೇಶಕ ಡಾ. ಪ. ಜಯರಾಜ್, ಡಾ. ಕೆ. ಎಂ. ಶ್ರೀಕುಮಾರ್, ಸಿ.ವಿ.ಡೆನ್ನಿ ಹಾಗೂ ಪಿಟಿಎ ಅಧ್ಯಕ್ಷ ಶ್ರೀಧರನ್ ಉಪಸ್ಥಿತರಿದ್ದರು. ಪಟನ್ನಕ್ಕಾಡ್ ಕೃಷಿ ಕಾಲೇಜಿನ ಡೀನ್ ಡಾ. ಪಿ. ಕೆ. ಮಿನಿ ಸ್ವಾಗತಿಸಿ, ಮುಹಮ್ಮದ್ ಸುಹೈಲ್ ವಂದಿಸಿದರು.
ಪ್ರಸಿದ್ಧ ಮಾವಿನ ತಳಿಗಳನ್ನು ಮಲಬಾರ್‍ಗೆ ಪರಿಚಯಿಸುವ ಉದ್ದೇಶದಿಂದ 2005 ರಿಂದ ನಡೆಯುತ್ತಿರುವ ಮಾವು ಉತ್ಸವ ಆಯೋಜಿಸಲಾಗುತ್ತಿದೆ. ಪಡನ್ನಕ್ಕಾಡ್ ಕೃಷಿ ಕಾಲೇಜಿನ ಮಾವಿನ ತೋಟದಲ್ಲಿ ಕಟಾವು ಮಾಡಿದ ಹಾಗೂ ಕೃಷಿ ವಿಶ್ವವಿದ್ಯಾಲಯದ ತೋಟಗಳಿಂದ ತಂದಿರುವ 22 ತಳಿಯ ಮಾವು ಪ್ರದರ್ಶನಕ್ಕಿರಿಸಲಾಗಿದೆ. ಮಾವು ಪ್ರದರ್ಶನ ಮತ್ತು ಮಾರಾಟದ ಜತೆಗೆ, ಮೊಳಕೆ ಮಾರಾಟ, ವಿಚಾರ ಸಂಕಿರಣ, ಕೀಟಗಳ ರೋಗನಿರ್ಣಯ ಶಿಬಿರ, ಪ್ರದರ್ಶನ, ತರಬೇತಿ, ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಆಹಾರ ವೈವಿಧ್ಯತೆಯನ್ನು ಸಹ ಆಯೋಜಿಸುತ್ತದೆ.