HEALTH TIPS

2024ಕ್ಕೆ 'ಶುಕ್ರಯಾನ': ಇಸ್ರೊದಿಂದ ಸಿದ್ಧತೆ

             ನವದೆಹಲಿಚಂದ್ರ ಹಾಗೂ ಮಂಗಳ ಗ್ರಹಕ್ಕೆ ಗಗನನೌಕೆಗಳನ್ನು ಉಡ್ಡಯನ ಮಾಡಿರುವ ಇಸ್ರೊ, ಈಗ ಶುಕ್ರ ಗ್ರಹದ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ.

              2024ರ ಡಿಸೆಂಬರ್‌ನಲ್ಲಿ ಗಗನನೌಕೆಯನ್ನು ಶುಕ್ರನತ್ತ ಉಡ್ಡಯನ ಮಾಡುವ ಗುರಿಯನ್ನು ಇಸ್ರೊ ಹೊಂದಿದೆ.

             'ಶುಕ್ರಯಾನ' ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್, 'ಶುಕ್ರ ಗ್ರಹಕ್ಕೆ ಗಗನನೌಕೆ ಕಳುಹಿಸುವ ಕಾರ್ಯಕ್ರಮದ ಯೋಜನಾ ವರದಿ ಸಿದ್ಧವಾಗಿದೆ. ಅಗತ್ಯವಿರುವ ಅನುದಾನ ಲಭ್ಯವಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಲು ವಿಜ್ಞಾನಿಗಳು ಗಮನ ನೀಡಬೇಕು' ಎಂದರು.

             'ಕಡಿಮೆ ಅವಧಿಯಲ್ಲಿಯೇ ಈ ಬಾಹ್ಯಾಕಾಶ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಸಾಮರ್ಥ್ಯ ಭಾರತಕ್ಕಿದೆ' ಎಂದರು.

              ಸೌರವ್ಯೂಹದಲ್ಲಿಯೇ ಹೆಚ್ಚು ಉಷ್ಣತೆ ಹೊಂದಿದ ಶುಕ್ರಗ್ರಹದ ಮೇಲ್ಮೈ ಹಾಗೂ ಅದರಡಿ ಏನಿದೆ ಎಂಬುದರ ಅಧ್ಯಯನ ಹಾಗೂ ಗ್ರಹವನ್ನು ಆವರಿಸಿರುವ 'ಗಂಧಕಾಮ್ಲದ ಮೋಡ'ಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ಭೇದಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಇಸ್ರೊ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries