ನವದೆಹಲಿ: ಭಾರತದ ರಫ್ತು ಪ್ರಮಾಣ ಮಾರ್ಚ್ ನಲ್ಲಿ ಅಂತ್ಯಗೊಂಡ 2022 ನೇ ಆರ್ಥಿಕ ವರ್ಷದಲ್ಲಿ ದಾಖಲೆಯ 421.8 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು 2030 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಟ್ರೇಡ್ 4.0 ಮೇಲಿನ ಚರ್ಚೆಯ ಉಪಹಾರ ಕೂಟದಲ್ಲಿ, ಮಾತನಾಡಿರುವ ಪೀಯೂಷ್ ಗೋಯಲ್, 8 ವರ್ಷಗಳಿಂದ ಸರ್ಕಾರ ರಚನಾತ್ಮಕ ಸುಧಾರಣೆಗಳತ್ತ ಹೆಚ್ಚಿನ ಗಮನ ಹರಿಸಿದೆ. ಆ ಸುಧಾರಣೆಗಳ ಪೈಕಿ ಪ್ರತಿಯೊಂದೂ ಭಾರತವನ್ನು ಬಿಕ್ಕಟ್ಟಿನ ಸಂದರ್ಭದಲ್ಲಿ ಕೈ ಹಿಡಿದು ನಿಲ್ಲಿಸಿದೆ ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತ ಅತ್ಯಂತ ಉತ್ಸಾಹ ಹೊಂದಿದ್ದು, ಕೋವಿಡ್-19, ಚಿಪ್ ಕೊರತೆ, ಸಂಘರ್ಷ, ಬೆಲೆ ಏರಿಕೆಯ ನಡುವೆಯೂ, ಭಾರತದ ಉದ್ಯಮಗಳು ಚೇತರಿಸಿಕೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.