ಪಣಜಿ: ಕಳ್ಳರ ವರ್ತನೆಗಳು ಕೆಲವೊಮ್ಮೆ ವಿಚಿತ್ರವಾಗಿರುತ್ತವೆ. ಸಿಕ್ಕಿದ್ದೆಲ್ಲವನ್ನ ದೋಚ್ಕೊಂಡು ಹೋದ ಕಳ್ಳರು ಐ ಎಲ್ ಯು ಎಂದು ಹೇಳಿ ಹೋಗಿದ್ದಾರೆ. ಈ ವಿಚಿತ್ರ ಘಟನೆ ಗೋವಾದಲ್ಲಿ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗಳು ಬಂಗಲೆಯೊಂದಕ್ಕೆ ನುಗ್ಗಿ, ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ದಕ್ಷಿಣ ಗೋವಾದ ಮಾರ್ಗಾವೊ ಪಟ್ಟಣದಲ್ಲಿ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮನೆ ಮಾಲೀಕರಿಗೆ 'ಐ ಲವ್ ಯೂ' ಎಂಬ ಸಂದೇಶವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮನೆ ಮಾಲೀಕ ಅಸಿಬ್ ಕ್ಸೆಕ್ ಮಂಗಳವಾರ ಎರಡು ದಿನಗಳ ರಜೆಯ ನಂತರ ಮನೆಗೆ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ . 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ನಗದು ಹಣದೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳರು ಟಿವಿ ಪರದೆಯ ಮೇಲೆ ಮಾರ್ಕರ್ ಬಳಸಿ 'ಐ ಲವ್ ಯೂ' ಎಂದು ಬರೆದಿರುವುದನ್ನು ಕಂಡು ಮಾಲೀಕರು ಆಶ್ಚರ್ಯಚಕಿತರಾದರು ಎಂದು ಅಧಿಕಾರಿ ಹೇಳಿದರು.